ಕೊಣನೂರು: ಇಲ್ಲಿಗೆ ಸಮೀಪದ ಕೊಣನೂರು- ಸೋಮವಾರಪೇಟೆ ಮಾರ್ಗದ ರಸ್ತೆಗೆ ಸಿದ್ದಾಪುರ ಬಳಿ ಹಾರಂಗಿ ಎಡದಂಡೆ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆ ಶಿಥಿಲಗೊಂಡು ಅಪಾಯಕಾರಿ ಸ್ಥಿತಿಗೆ ತಲುಪಿದೆ.

ಸಿದ್ದಾಪುರದ ಬಳಿ ಹಾದು ಹೋಗಿರುವ ಹಾರಂಗಿ ನಾಲೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮಾರ್ಗವಾಗಿ ಕೊಡಗು ಜಿಲ್ಲೆ ಹಾಗೂ ಬನ್ನೂರು ಸುತ್ತಮುತ್ತ ಬರುವ ಸಾಕಷ್ಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಸೇತುವೆ ಶಿಥಿಲಗೊಂಡು ಹಲವು ವರ್ಷಗಳೇ ಕಳೆದರೂ ದುರಸ್ತಿಯಾಗಿಲ್ಲ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಸೇತುವೆಯ ತಳಭಾಗ ರಾಡ್ನಿಂದ ಸಿಮೆಂಟ್ ಬೇರ್ಪಟ್ಟು ಒಂದು ಕಡೆ ಕುಸಿದು ಬಿದ್ದಿದೆ. ಕೊಣನೂರು ಹಾರಂಗಿ ಪುನರ್ವಸತಿ ಉಪ ವಿಭಾಗ ಎಂಜಿನಿಯರು ಗಳು ಆಗ ಶಿಥಿಲಗೊಂಡು ಹಾಳಾದ ಸೇತುವೆಯ ಪುನರ್ನಿರ್ಮಾಣ ಕಾರ್ಯ ಮಾಡದೇ ತಳಭಾಗ ಕುಸಿದು ಹೋದ ಭಾಗಕ್ಕೆ ಮಾತ್ರ ಉಸುಕು ಮಣ್ಣು ಹಾಕಿ ಭದ್ರಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ತಡೆಗೋಡೆ ಮೇಲ್ಮಟ್ಟಕ್ಕೆ ಸುರಿದು ಭದ್ರಪಡಿಸಿದ್ದ ಮಣ್ಣು ತಳಮಟ್ಟಕ್ಕೆ ಜಾರುತ್ತಾ ಸಡಿಲಗೊಂಡು ಸೇತುವೆಯೇ ಈಗ ಸಂಪೂರ್ಣ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ.

ಸುಮಾರು 500 ಅಡಿ ಆಳವಿರುವ ನಾಲೆಯ ಮೇಲು ಸೇತುವೆ ತಳಭಾಗಕ್ಕೆ ಬಳಸಿರುವ ರಾಡ್ ತುಕ್ಕು ಹಿಡಿಯುತ್ತಿವೆ. ಸಿಮೆಂಟ್ ಕಾಂಕ್ರೀಟ್ ಅಲ್ಲಲ್ಲಿ ಕಿತ್ತು ಹೋಗಿ ಬಿರುಕು ಬಿಟ್ಟಿದೆ. ಸೇತುವೆ ಮೇಲೆ ಮಧ್ಯೆ ರಸ್ತೆ ಕುಸಿದಿದ್ದು, ಅಪಾಯದ ಮುನ್ಸೂಚನೆಯಾಗಿದೆ. ಒಮ್ಮೆ ಸೇತುವೆ ತಳಭಾಗ ನೋಡಿದರೆ ಇಂದೋ ನಾಳೆಯೋ ಬಿದ್ದು ಹೋಗುವ ಹಂತದಲ್ಲಿದ್ದು, ಭೀತಿ ಹುಟ್ಟಿಸುತ್ತಿದೆ.

ಈ ಸೇತುವೆ ಮೇಲೆ ಕೊಣನೂರು- ಸೋಮವಾರ ಪೇಟೆ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ಗಳು ಸೇರಿದಂತೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿ ಸುತ್ತವೆ. ರಾತ್ರಿ ಸಮಯದಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸೇತುವೆಯು ಇರುವುದೇ ತಿಳಿಯು ವುದಿಲ್ಲ. ರಸ್ತೆಯ ಯಾವ ಭಾಗಕ್ಕೂ ತಡೆಗೋಡೆಗಳಿಲ್ಲ. ಅಪಘಾತ ಸೂಚನಾ ಫಲಕಗಳನ್ನೂ ನೆಟ್ಟಿಲ್ಲ. ಶಿಥಿಲಗೊಂಡ ಸೇತುವೆ ಮೇಲೆ ದಿನನಿತ್ಯ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.

ಸರ್ಕಾರ ಹಲವು ಯೋಜನೆಗಳ ಮೂಲಕ ನಾಲೆಯ ಅಭಿವೃದ್ಧಿಗೆ ಕೋಟ್ಯಂತರ ಹಣ ವ್ಯಯಿಸುತ್ತಿದೆ. ಆದರೆ ಸರ್ಕಾರದ ಅನುದಾನವು ಸಮರ್ಪಕವಾಗಿ ಬಳಕೆ ಯಾಗದೇ ನಾಲೆ ಅಭಿವೃದ್ಧಿಗೆ ದಕ್ಕುತ್ತಿಲ್ಲ ಎಂಬುದಕ್ಕೆ ದುಃಸ್ಥಿತಿಯಲ್ಲಿರುವ ಸೇತುವೆ ಗಳೇ ಸಾಕ್ಷಿ. ಇದರಿಂದ ರೈತಾಪಿ ವರ್ಗದ ಜನರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯಗಳು ಆಗದೇ ನಿರ್ಲಕ್ಷೀಡಾಗುತ್ತಿವೆ. ಇದಕ್ಕೆ ಸಂಬಂಧಿಸಿದ ನೀರಾವರಿ ಇಲಾಖೆ ಎಂಜಿನಿ ಯರ್ ಬೇಜವಾಬ್ದಾರಿ ಹಾಗೂ ಆಡಳಿತ ಇಚ್ಚಾಶಕ್ತಿ ಕೊರತೆಯೇ ಕಾರಣ ಎಂಬುದು ಸಾರ್ವಜನಿಕರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.