ರಾಮನಾಥಪುರ: ಮಹಿಳೆಯರೂ ದುಡಿಯುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಪರಸ್ಪರ ಸಹಕಾರ ಮನೋಭಾವದ ಮೂಲಕ ಅಭಿವೃದ್ಧಿ ಸಾಧಿಸಬೇಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ಹೇಳಿದರು.

ಇಲ್ಲಿನ ಪ್ರಸನ್ನ ಸುಬ್ರಹ್ಮಣ್ಯ ಸಮುದಾಯ ಭವನದಲ್ಲಿ ಈಚೆಗೆ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಣನೂರು ವಲಯದ ರಾಮನಾಥಪುರ ಎ, ಬಿ ಮತ್ತು ಸಿ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ ದರು. ಲಿಂಗ ಭೇದವಿಲ್ಲದೇ ಸ್ತ್ರೀಯರು ಮತ್ತು ಪುರಷರು ಸಮಾನತೆಯಿಂದ ದುಡಿದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಸೋಮವಾರಪೇಟೆ ವಲಯ ಯೋಜನಾಧಿಕಾರಿ ಎಂ. ಸತೀಶ್ ಮಾತನಾಡಿ, 18 ಗ್ರಾ.ಪಂ. ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಣನೂರು ವಲಯವು 505 ಸಂಘಗಳನ್ನು ಒಳಗೊಂಡು ಒಟ್ಟು 5,500 ಸದಸ್ಯರನ್ನು ಹೊಂದಿದೆ. ಇದುವರೆಗೆ ರೂ. 31,78 ಲಕ್ಷ ಉಳಿತಾಯ ಮಾಡಿದ್ದು ರೂ. 7.50 ಕೋಟಿ ಸಾಲ ವಿತರಿಸಿದೆ. 110 ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ರೂ. 1.10 ಲಕ್ಷ ಅನುದಾನ ನೀಡಿದೆ. 36 ಕುಟುಂಬಗಳಿಗೆ ರೂ. 36 ಸಾವಿರ ಕೃಷಿ ಅನುದಾನ ಹಾಗೂ 36 ಕೃಷಿ ತರಬೇತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಮಾಹಿತಿ ನೀಡಿದರು.

ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಳದ ಪಾರುಪ ತ್ತೇದಾರ್ ಟಿ. ಸೀತಾರಾಂ ಕಾರ್ಯಕ್ರಮ ಉದ್ಘಾಟಿ ಸಿದರು. ಹುಲಿಕಲ್ ಗ್ರಾ.ಪಂ. ಮಾಜಿ ಸದಸ್ಯ ಸತೀಶ್, ಶಾಸಕರ ಆಪ್ತ ಕಾರ್ಯದರ್ಶಿ ರಂಗನಾಥ್ ಹಾಗೂ ಒಕ್ಕೂಟದ ಮಹಿಳಾ ಪದಾಧಿಕಾರಿಗಳು ಇದ್ದರು.

ಹೇಮಾವತಿ ಸಂಘದ ಸದಸ್ಯೆ ಗೀತಾ ಸ್ವಾಗತಿಸಿ, ರಾಮನಾಥಪುರ ಸೇವಾ ನಿರತ ನಂದಕುಮಾರ್ ವರದಿ ಮಂಡಿಸಿ, ಕೊಣನೂರು ವಲಯ ಮೇಲ್ವಿ ಚಾರಕ ಜಗದೀಶ್ ನಿರೂಪಿಸಿ, ಪುನಿತ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.