ಬಾಣಾವರ: ‘ನಮ್ಮ ಅನೇಕ ಹಳ್ಳಿಗಳು ನಗರಗಳಾಗಿವೆ. ಆದರೆ ಬಾಣಾವರ ಗ್ರಾಮ ಪಂಚಾಯಿತಿಗೆ ಮಾತ್ರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಭಾಗ್ಯ ಇನ್ನೂ ಬಂದಿಲ್ಲ.

1882ರವರೆಗೂ ಕಡೂರು ಜಿಲ್ಲೆಯಲ್ಲಿದ್ದ ಬಾಣಾವರ ತಾಲ್ಲೂಕು ಕೇಂದ್ರವಾಗಿತ್ತು. 1882ರಲ್ಲಿ ಹೋಬಳಿ ಕೇಂದ್ರವಾಗಿ ಬದಲಾಯಿತು. 1886ರಲ್ಲಿ ಕಡೂರು ಜಿಲ್ಲೆಯಿಂದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿಗೆ ಸೇರ್ಪಡೆಯಾಯಿತು.

1942ರಿಂದ 1987ರವರೆಗೆ ಪುರಸಭೆಯಾಗಿದ್ದ ಪಟ್ಟಣ 1987ರಲ್ಲಿ ಮಂಡಲ ಪಂಚಾಯಿತಿಯಾಗಿ ಪರಿವರ್ತನೆ ಹೊಂದಿ ನಂತರ ಮಂಡಲ ಪಂಚಾಯಿತಿಯಾಗಿ ಇದೀಗ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹೋಬಳಿ ಕೇಂದ್ರ ವಿಸಿ್ತರ್ಣದಲ್ಲೂ ದೊಡ್ಡ ಪಟ್ಟಣ, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬಾಣಾವರ ಬಟ್ಟೆ ವ್ಯಾಪರಕ್ಕೆ ಪ್ರಸಿದ್ಧ. ಪಟ್ಟಣದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ರಾಜ್ಯದ ಎಲ್ಲ ಪ್ರಮುಖ ನಗರಗಳ ಸಂಪರ್ಕಹೊಂದಿ ದಿನೇ ದಿನೇ ಬೆಳೆಯುತ್ತಿದೆ. 4 ಬ್ಯಾಂಕ್‌ಗಳಿವ, ಅಂಚೆ ಕಚೇರಿ, ಪೊಲೀಸ್ ಠಾಣೆ, ಉಪ ನೊಂದಣಿ ಕಚೆೇರಿ, ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಐಟಿಐ, 4 ಪ್ರೌಢಶಾಲೆ, 8 ಪ್ರಾಥಮಿಕ ಶಾಲೆಗಳು, ರಾಜಸ್ವ ನಿರೀಕ್ಷಕರ ಕಚೇರಿ, ಕೆಇಬಿ ಉಪ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೇಲ್ದರ್ಜೆಗೇರಿದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಪಟ್ಟಣಕ್ಕೆ ಹೊಂದಿಕೊಂಡತಿರುವ ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ನಾಗರೀಕ ಸೌಲಭ್ಯಗಳನ್ನು ಒಳಗೊಂಡಿದೆ.

ಪಟ್ಟಣವನ್ನು ಮೇಲ್ದರ್ಜೆಗೆ ಏರಿಸುವಂತೆ 2009 ರಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಪಟ್ಟಣದ ಜನ ಸಂಖ್ಯೆ 10 ಸಾವಿರ ಮೀರಿದೆ.

ನಾಗಲೋಟದಿಂದ ಬೆಳೆಯುತ್ತಿರುವ ಪಟ್ಟಣದ ಅಭಿವೃದ್ದಿಗೆ ಸದ್ಯ ಸರ್ಕಾರದಿಂದ ದೊರೆಯುತ್ತಿರುವ ಅನುದಾನ ಸಾಲದಿರುವುದರಿಂದ ಬಾಣಾವರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಂಬಂಧಪಟ್ಟವರು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರ ಅಭಿಲಾಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.