ಹಳೇಬೀಡು: ಪಟ್ಟಣದ ಪೊಲೀಸ್ ಉಪಠಾಣೆ ಮೇಲ್ದರ್ಜೆಗೆ ಪರಿವರ್ತನೆಯಾದ ನಂತರ, ಉಪಠಾಣೆಯಿದ್ದ ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಕಟ್ಟಡದ ಗೋಡೆಗಳ ಮೇಲ್ಪದರ ಮಾತ್ರವಲ್ಲದೇ, ಇಟ್ಟಿಗೆಗಳು ಸಹ ಪುಡಿಯಾಗಿ ಉದುರುತ್ತಿದೆ. ಇಲಿ, ಹೆಗ್ಗಣ, ಹಾವುಗಳು ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಕಟ್ಟಡದ ಪಕ್ಕದಲ್ಲಿ ಮಕ್ಕಳು ಆಟ ಆಡುತ್ತಾರೆ. ಕಟ್ಟಡ ಕುಸಿದು ಬೀಳುವ ಆತಂಕ ಪೋಷಕರನ್ನು ಕಾಡುತ್ತಿದೆ.

ಗೃಹರಕ್ಷಕ ದಳದ ಕಚೇರಿಗೆ ಕಟ್ಟಡದ ಅಗತ್ಯವಿದೆ. ಆದ್ದರಿಂದ, ಈ ಕಟ್ಟಡವನ್ನು ಅವರಿಗೆ ವಹಿಸಿದರೆ ಅನುಕೂಲ ಎನ್ನುತ್ತಾರೆ ಮುಖಂಡ ಶಿವಪ್ಪ.

ಹಳೇಬೀಡು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಾಯಕ ಸಬ್ಇನ್ಸ್ಪೆಕ್ಟರ್ ಹಾಗೂ ಮಹಿಳಾ ಪೇದೆಗಳಿಗೆ ವಸತಿಗೃಹದ ಅಗತ್ಯತೆ ಇದೆ. ವಸತಿಗೃಹ ನಿರ್ಮಿಸಿದರೆ ಸಿಬ್ಬಂದಿಗೆ ಸೂರು ದೊರಕುವುದಲ್ಲದೇ, ಸುತ್ತಲಿನ ನಿವಾಸಿಗಳಿಗೆ ಸುರಕ್ಷತೆ ನೀಡಿದಂತಾಗುತ್ತದೆ ಎನ್ನುತ್ತಾರೆ ಸೋಮಶೇಖರ್.

ಇಲಾಖೆಯ ಹಳೆಯ ಕಟ್ಟಡ ಶಿಥಿಲವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಉನ್ನತ ಅಧಿಕಾರಿಗಳಿಗೆ ಕಟ್ಟಡದ ಬಗ್ಗೆ ತಿಳಿಸುತ್ತೇವೆ ಎನ್ನುತ್ತಾರೆ ಸಬ್ಇನ್ಸ್ಪೆಕ್ಟರ್ ಕೆ.ಎಂ. ಮಂಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.