ಜಾವಗಲ್: ಸಮೀಪದ ಕೆರೆಕೋಡಿಹಳ್ಳಿ ಧನಂಜಯ ಪುರಕ್ಕೆ ಹೋಗುವ ರಸ್ತೆಯ ಡಾಂಬರ್ ಕಂಡು ಸಾಕಷ್ಟು ವರ್ಷಗಳಾಗಿವೆ. ಈ ಗ್ರಾಮ ಸಾರಿಗೆ ವ್ಯವಸ್ಥೆಯಿಂದ ವಂಚಿತ ವಾಗಿದೆ. ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಚರಂಡಿ ವ್ಯವಸ್ಥೆ ಹೇಳತೀರದು.

400 ಮನೆಗಳಿರುವ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಹಾಲಿನ ಡೇರಿ ಇದೆ. ಗ್ರಾಮದೊಳಗೆ ಬೀರಲಿಂಗೇ ಶ್ವರ, ಕರಿಯಮ್ಮ, ತಿಮ್ಮಪ್ಪನ ದೇವಾಲಯಗಳಿವೆ. ಉಳಿದಂತೆ ಸಮಸ್ಯೆಗಳದ್ದೇ ಸಾಮ್ರಾಜ್ಯ.

ಹಳ್ಳಿಗಳೇ ದೇಶದ ಜೀವನಾಡಿ. ಹಳ್ಳಿ ಉದ್ದಾರವಾ ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ರಾಜಕಾರಣಿ ಗಳ ಮಾತಿಗಷ್ಟೇ ಸೀಮಿತವಾದ ತತ್ವಗಳು. ಹಳ್ಳಿಗಳ ಅಭಿವೃದ್ಧಿಗೆ ಲಕ್ಷಾಂತರ ಹಣ ಬಿಡುಗಡೆಯಾದರೂ ಗ್ರಾಮೀಣ ಪ್ರದೇ ಶದ ಸ್ಥಿತಿ ಸುಧಾರಣೆ ಆಗುತ್ತ್ಲ್ಲಿಲ.

ಗ್ರಾಮದೊಳಗೆ ಕಾಲಿಟ್ಟ ತಕ್ಷಣ ಚರಂಡಿಯಲ್ಲಿ ಹರಿಯದೆ ಉಳಿದಿರುವ ಕೊಳಚೆ ನೀರು ಗೋಚರಿಸುತ್ತದೆ. ಕೆಲವು ಬಿದಿಗಳಲ್ಲಿ ಚರಂಡಿ ಇದ್ದರೆ ಹೆಚ್ಚಿನವುಗಳಲ್ಲಿ ಇಲ್ಲ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಗ್ರಾಮದೊಳಗಿರುವ ಕೊಳವೆ ಬಾವಿಯ ಕೈ ಪಂಪುಗಳು ಕೆಟ್ಟು ಹೋಗಿವೆ. ಈ ಗ್ರಾಮ ಬಂದೂರು ಪಂಚಾಯತಿಗೆ ಒಳಪಡುತ್ತದೆ. ಅಧಿಕಾರಿಗಳು ಗ್ರಾಮದೊಳಗೆ ಒಂದು ಬಾರಿ ತಿರುಗಿದರೆ ಗ್ರಾಮದ ಸಮಸ್ಯೆಗಳು ಗೋಚರಿಸುತ್ತವೆ. ಆದರೆ ಯಾರೂ ಬರುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.