ಭಾನುವಾರ, ಜುಲೈ 25, 2021
25 °C
322ಕ್ಕೆ ಏರಿಕೆಯಾದ ಪ್ರಕರಣಗಳು: 29 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಹಾವೇರಿ ಜಿಲ್ಲೆಯಲ್ಲಿ ಚಾಲಕರು ಸೇರಿದಂತೆ 14 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೆ.ಎಸ್.ಆರ್.ಟಿ.ಸಿ.ಯ ಮೂವರು ಬಸ್ ಚಾಲಕರು ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ಒಟ್ಟು 14 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 29 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 322 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಒಟ್ಟು 211 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಏಳು ಮಂದಿ ಮೃತಪಟ್ಟಿದ್ದಾರೆ. 104 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದ್ದಾರೆ.

ಹಾವೇರಿ, ಬ್ಯಾಡಗಿ ಹಾಗೂ ಸವಣೂರ ತಾಲ್ಲೂಕಿನಲ್ಲಿ ತಲಾ ಎರಡು, ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೂರು, ಹಿರೇಕೆರೂರು ತಾಲ್ಲೂಕಿನಲ್ಲಿ ನಾಲ್ಕು ಹಾಗೂ ಹಾನಗಲ್ ತಾಲ್ಲೂಕಿನಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸವಣೂರಿನ ಲಕ್ಸರ್ ಬಜಾರಿನ ಪಿ-28398ರ ಸಂಪರ್ಕಿತರಾದ 14 ವರ್ಷದ ಬಾಲಕಿ (ಎಚ್.ವಿ.ಆರ್-308), 16 ವರ್ಷದ ಬಾಲಕಿ (ಎಚ್.ವಿ.ಆರ್-309), ಹಾವೇರಿ ತಾಲ್ಲೂಕಿನ ಕರ್ಜಗಿಯ ಪಿ-23225ರ ಸಂಬಂಧಿಕಳಾದ 19 ವರ್ಷದ ಗರ್ಭಿಣಿ (ಎಚ್.ವಿ.ಆರ್-311), ಸದರಿ ಸೋಂಕಿತರ ಪ್ರಾಥಮಿಕ ಸಂಪರ್ಕದ ಹಾವೇರಿ ಅಶ್ವಿನಿ ನಗರದ 67 ವರ್ಷದ ಪುರುಷ (ಎಚ್.ವಿ.ಆರ್-313), ಬ್ಯಾಡಗಿ ತಾಲ್ಲೂಕಿನ ಆನೂರ ಗ್ರಾಮದ 14 ವರ್ಷದ ಬಾಲಕ (ಎಚ್.ವಿ.ಆರ್-307) ಹಾಗೂ 35 ವರ್ಷದ ಮಹಿಳೆ (ಎಚ್.ವಿ.ಆರ್.-310), ಹಾನಗಲ್ ತಾಲ್ಲೂಕಿನ ಕೂಡಲ ಗ್ರಾಮದ 23 ವರ್ಷದ ಪುರುಷನಿಗೆ (ಎಚ್.ವಿ.ಆರ್-312) ಸೋಂಕು ದೃಢಪಟ್ಟಿದೆ. 

ರಾಣೆಬೆನ್ನೂರ ನಗರದ 53 ವರ್ಷದ ಪುರುಷ (ಎಚ್.ವಿ.ಆರ್-316), 34 ವರ್ಷದ ಪುರುಷ (ಎಚ್.ವಿ.ಆರ್.-317), ಕಾಕೋಳದ 36 ವರ್ಷದ ಪುರುಷ (ಎಚ್.ವಿ.ಆರ್.-315), ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರಾದ ಹಿರೇಕೆರೂರು ಚೌಡೇಶ್ವರ ನಗರದ 37 ವರ್ಷದ ಪುರುಷ (ಎಚ್.ವಿ.ಆರ್-320), ರಾಮತೀರ್ಥದ 40 ವರ್ಷದ ಪುರುಷ (ಎಚ್.ವಿ.ಆರ್-319), ಶಿರಗುಂಬಿ ಗ್ರಾಮದ 30 ವರ್ಷದ ಪುರುಷ (ಎಚ್.ವಿ.ಆರ್-318) ಹಾಗೂ ಹಂಸಭಾವಿಯ ಜನತಾ ಪ್ಲಾಟಿನ ನಿವಾಸಿ 48ನೇ ವರ್ಷದ ಪುರುಷ (ಎಚ್.ವಿ.ಆರ್-314) ಸೋಂಕು ದೃಢಪಟ್ಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು