ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು ಆರೋಪ ಸಾಬೀತು: 2 ವರ್ಷ ಶಿಕ್ಷೆ 

Published 31 ಆಗಸ್ಟ್ 2023, 15:42 IST
Last Updated 31 ಆಗಸ್ಟ್ 2023, 15:42 IST
ಅಕ್ಷರ ಗಾತ್ರ

ರಾಣೆಬೆನ್ನೂರು: ₹13,500 ಕಳವು ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಪ್ಪೇಲೂರಿನ ನಿಂಗರಡ್ಡಿ ದೇವೇಂದ್ರಪ್ಪ ಗುಡ್ಡರೆಡ್ಡಿ ಎಂಬುವರಿಗೆ ಎರಡು ವರ್ಷ ಕಠಿಣ ಶಿಕ್ಷೆ ಮತ್ತು ₹4000 ದಂಡ ವಿಧಿಸಿ ತೀರ್ಪು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಸೆಷನ್ಸ್‌ ನ್ಯಾಯಾಧೀಶ ಬಿ.ಸಿದ್ದರಾಜು ಅವರು ಗುರುವಾರ ಈ ತೀರ್ಪು ನೀಡಿದರು.

ತಾಲ್ಲೂಕಿನ ಕುಪ್ಪೇಲೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿದ್ದ ನಿಂಗರಡ್ಡಿ  ಕ್ಯಾಶ್‌ಕೌಂಟರ್‌ ಬಳಿ ಕಸ ಗೂಡಿಸುವುದಾಗಿ ಹೇಳಿ, ₹13,500 ಕಳವು ಮಾಡಿದ್ದ ಘಟನೆ 2017ರ ಅಕ್ಟೋಬರ್‌ 10ರಂದು ನಡೆದಿತ್ತು. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕಿ ಮಧುಮತಿ ನಾಗಾರಜ ಸಿದ್ನೂರಕರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT