ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿತೀಯ ಪಿಯು ಪರೀಕ್ಷೆ: ಹಾವೇರಿಗೆ ಜಿಲ್ಲೆಗೆ ಶೇ 74.13 ಫಲಿತಾಂಶ

ರಾಜ್ಯಕ್ಕೆ 24ನೇ ಸ್ಥಾನ, ಬಾಲಕಿಯರ ಮೇಲುಗೈ
Last Updated 21 ಏಪ್ರಿಲ್ 2023, 14:31 IST
ಅಕ್ಷರ ಗಾತ್ರ

ಹಾವೇರಿ: 2023ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆ ಶೇ 74.13 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 24ನೇ ಸ್ಥಾನ ಗಳಿಸಿದೆ.

2022ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ 66.64ರಷ್ಟು ಫಲಿತಾಂಶ ಸಿಕ್ಕಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇ 8ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಕಲಾ ವಿಭಾಗದಲ್ಲಿ ಶೇ 68.39, ವಾಣಿಜ್ಯ ವಿಭಾಗದಲ್ಲಿ ಶೇ 77.26 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 83.28ರಷ್ಟು ಫಲಿತಾಂಶ ಬಂದಿದೆ.

ಈ ಬಾರಿ 13,976 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 10,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 7036 ವಿದ್ಯಾರ್ಥಿಗಳ ಪೈಕಿ 4812 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 3853ರ ಪೈಕಿ 2977 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 3087ರ ಪೈಕಿ 2571 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ 11,235 ವಿದ್ಯಾರ್ಥಿಗಳ ಪೈಕಿ 7547 (ಶೇ 67.17) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 4730 ವಿದ್ಯಾರ್ಥಿಗಳ ಪೈಕಿ 3795 (ಶೇ 80.23) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

7,549 ಬಾಲಕರ ಪೈಕಿ 4,692 ಬಾಲಕರು (ಶೇ 62.15), 8,416 ಬಾಲಕಿಯರಲ್ಲಿ 6,650 ಬಾಲಕಿಯರು (ಶೇ 79.02) ಉತ್ತೀರ್ಣರಾಗುವ ಮೂಲಕ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಫ್ರೆಶ್‌ ವಿದ್ಯಾರ್ಥಿಗಳು ಶೇ 74.13, ಖಾಸಗಿ ವಿದ್ಯಾರ್ಥಿಗಳು ಶೇ 35.37, ಪುನರಾವರ್ತಿತ (ರಿಪೀಟರ್ಸ್‌) ವಿದ್ಯಾರ್ಥಿಗಳು ಶೇ 55.25ರಷ್ಟು ತೇರ್ಗಡೆಯಾಗಿದ್ದಾರೆ.

ನಗರ ಪ್ರದೇಶದಲ್ಲಿ 10,030 ವಿದ್ಯಾರ್ಥಿಗಳ ಪೈಕಿ 7,184 (ಶೇ 71.63) ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 5935 ವಿದ್ಯಾರ್ಥಿಗಳ ಪೈಕಿ 4158 (ಶೇ 70.06) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

***

ಮೂರು ವಿಭಾಗಗಳ ಟಾಪರ್‌ಗಳು

ಕಲಾ ವಿಭಾಗ: ಶಿಗ್ಗಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸವಿತಾ ಶಿವಲೋಚನಮಠ (580), ಹಾವೇರಿಯ ಜಿ.ಎಚ್‌. ಪಿಯು ಕಾಲೇಜಿನ ಸೌಮ್ಯ ಬಾರಿಗಿಡದ (580), ರಾಣೆಬೆನ್ನೂರಿನ ಸಂಜೀವಿನಿ ಪಿಯು ಕಾಲೇಜಿನ ಅನುಷಾ ಹಿತ್ತಲಮನಿ (580) ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗ: ರಾಣೆಬೆನ್ನೂರಿನ ರೋಟರಿ ಪಿಯು ಕಾಲೇಜಿನ ಆದರ್ಶ ತಾಟಪಟ್ಟಿ (585) ಅಂಕ ಗಳಿಸುವ ಮೂಲಕ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ: ಕುಮಾರಪಟ್ಟಣದ ಪಾಲಿ ಫೈಬರ್ಸ್‌ ಪಿಯು ಕಾಲೇಜಿನ ದೇವಾಂಕ ನಂಬಿಯರ (584) ಮತ್ತು ಹಾವೇರಿಯ ಎಂ.ಆರ್‌.ಎಂ. ಪಿಯು ಕಾಲೇಜಿನ ಅಕ್ಷತಾ ವಿ.ಬಳ್ಳಿ (584) ಫಲಿತಾಂಶ ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

***

ವೈದ್ಯಳಾಗುವ ಕನಸಿದೆ: ಅಕ್ಷತಾ

ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಎಂ.ಆರ್‌.ಎಂ. ಪಿಯು ಕಾಲೇಜಿನ ಅಕ್ಷತಾ ವಿನಾಯಕ ಬಳ್ಳಿ (ಶೇ 97.33) ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಜೀವಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಶೇ 100 ಅಂಕ ಪಡೆದಿದ್ದಾರೆ.

‘ಜಿಲ್ಲೆಯ ಟಾಪರ್‌ ಆಗಿರುವುದು ಖುಷಿ ತಂದಿದೆ. ಬಡತನದ ನಡುವೆ ಕಷ್ಟಪಟ್ಟು ಓದಿದ ಫಲವಿದು. ಯಾವುದೇ ಟ್ಯೂಷನ್‌ಗೆ ಹೋಗದೆ ಕಾಲೇಜಿನಲ್ಲಿ ಉಪನ್ಯಾಸಕರು ನೀಡಿದ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದೆ. ನೀಟ್‌ನಲ್ಲಿ ಉತ್ತಮ ರ್‍ಯಾಂಕ್‌ ಪಡೆದು ಡಾಕ್ಟರ್ ಆಗುವ ಕನಸು ಹೊಂದಿರುವೆ’ ಎಂದು ಅಕ್ಷತಾ ಬಳ್ಳಿ ಮನದಾಳದ ಮಾತನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT