ಗುರುವಾರ , ಸೆಪ್ಟೆಂಬರ್ 24, 2020
27 °C
1,844ಕ್ಕೆ ಏರಿಕೆಯಾದ ಪಾಸಿಟಿವ್‌ ಪ್ರಕರಣ: 69 ಮಂದಿ ಬಿಡುಗಡೆ

ಹಾವೇರಿ ಜಿಲ್ಲೆಯಲ್ಲಿ 80 ಮಂದಿಗೆ ಕೋವಿಡ್‌-19 ದೃಢ, ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸವಣೂರ ತಾಲ್ಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಡಿ’ ಗ್ರೂಪ್‌ ನೌಕರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಒಟ್ಟು 80 ಮಂದಿಗೆ ಕೋವಿಡ್‌ ದೃಢಗೊಂಡಿದೆ ಹಾಗೂ ಗುಣಮುಖರಾದ 69 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ ಒಟ್ಟು 1844 ಕೋವಿಡ್‌ ಪ್ರಕರಣಗಳು ದೃಢಗೊಂಡಿವೆ. ಒಟ್ಟು 1022 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ ಹಾಗೂ 36 ಮಂದಿ ಮೃತಪಟ್ಟಿದ್ದಾರೆ. 201 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ 585 ಸೋಂಕಿತರು ಡೆಡಿಕೇಟೆಡ್‌ ಕೋವಿಡ್‌ ಆಸ್ಪತ್ರೆ (ಡಿಸಿಎಚ್‌), ಕೋವಿಡ್‌ ಕೇರ್‌ ಸೆಂಟರ್‌ (ಸಿಸಿಸಿ), ಡೆಡಿಕೇಟಡ್‌ ಕೋವಿಡ್‌ ಹೆಲ್ತ್‌ ಸೆಂಟರ್‌ (ಡಿಸಿಎಚ್‌ಸಿ)ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 786 ಪ್ರಕರಣಗಳು ಸಕ್ರಿಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಭಾನುವಾರ ದೃಢಗೊಂಡ ಪ್ರಕರಣಗಳಲ್ಲಿ, ಬ್ಯಾಡಗಿ– 3, ಹಾನಗಲ್‌–4, ಹಾವೇರಿ–23, ಹಿರೇಕೆರೂರು–18, ರಾಣೆಬೆನ್ನೂರು–19, ಸವಣೂರ–10 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 3 ಪ್ರಕರಣಗಳು ದೃಢಪಟ್ಟಿವೆ. 

ಸೋಂಕಿತರ ವಿವರ: ಬ್ಯಾಡಗಿ ತಾಲ್ಲೂಕಿನ ಬನ್ನಿಹಳ್ಳಿ, ಚಿಕ್ಕಾಂಜಿ ಹಾಗೂ ಬ್ಯಾಡಗಿ ಪಟ್ಟಣದ ಬಸವೇಶ್ವರ ನಗರ, ಹಾನಗಲ್‌ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ, ಗುಡ್ಡದ ಮತ್ತಿಹಳ್ಳಿ, ಯಲಿವಾಳ ಹಾಗೂ ಹಾನಗಲ್‌ ಪಟ್ಟಣದ ನವನಗರಗಳಲ್ಲಿ ಸೋಂಕು ಪ್ರಕರಣ ಪತ್ತೆಯಾಗಿವೆ.

ಹಾವೇರಿ ತಾಲ್ಲೂಕಿನ ನಾಗಿನಮಟ್ಟಿ, ಕೊರಗರ ಓಣಿ, ಶಿವಯೋಗೀಶ್ವರ ನಗರ, ಹಾವನೂರು ಗ್ರಾಮ, ಗುತ್ತಲದ ಕುರುಬಗೇರಿ ಓಣಿ, ವಡ್ಡರಗೇರಿ, ಕೊರಡೂರ, ಕೋಳೂರ, ಚೆನ್ನೂರ, ಅಕ್ಕೂರ, ನೆಗಳೂರ ಗ್ರಾಮಗಳಲ್ಲಿ ಕೋವಿಡ್‌ ಪ್ರಕರಣ ದೃಢಗೊಂಡಿವೆ. 

ಹಿರೇಕೆರೂರ ತಾಲ್ಲೂಕಿನ ಚಿಕ್ಕೇರಿ ಗ್ರಾಮ, ಮಾಸೂರ, ತಿಪ್ಪಾಯಿಕೊಪ್ಪ, ಚಿಕ್ಕಯಡಚಿ, ಚಿಕ್ಕಮೊರಬ, ಹಿರೇಕೆರೂರ ಪಟ್ಟಣದ ಪೊಲೀಸ್‌ ವಸತಿಗೃಹ, ರಟ್ಟೀಹಳ್ಳಿ ಪಟ್ಟಣದ ತರಳಬಾಳು ಬಡಾವಣೆ, ಶಿರಗುಂಬಿ ರಸ್ತೆ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಿವೆ. 

ರಾಣೆಬೆನ್ನೂರು ತಾಲ್ಲೂಕಿನ ವೀರಾಪುರ, ಚೌಡಯ್ಯದಾನಪುರ, ವೈ.ಟಿ.ಹೊನ್ನತ್ತಿ, ರಾಣೆಬೆನ್ನೂರು ನಗರದ ಕೊಟ್ರೇಶ್ವರ ಮಠ, ಹರಳಯ್ಯ ನಗರ, ಚಳಗೇರಿ,  ಬನಶಂಕರ ಮೊದಲನೇ ಅಡ್ಡರಸ್ತೆ ಮತ್ತು 2ನೇ ಅಡ್ಡರಸ್ತೆ, ವಾಗೀಶ ನಗರ, ಕುರುಬಗೇರಿ, ಶ್ರೀರಾಮನಗರ 4ನೇ ಅಡ್ಡರಸ್ತೆ, ಕೆರೆ ಮಲ್ಲಾಪುರ,  ಕೊನಬೇವು ಪ್ಲಾಟ್‌ ಪ್ರದೇಶಗಳಲ್ಲಿ ಕೋವಿಡ್‌ ಪ್ರಕರಣ ದೃಢಗೊಂಡಿವೆ. 

ಸವಣೂರ ತಾಲ್ಲೂಕಿನ ಕರಡಗಿ ಗ್ರಾಮ, ಹೊಸಮನ್ನಂಗಿ, ಸಿಂಪಿಗಳ್ಳಿ, ಪಟ್ಟಣದ ಬುಧವಾರಪೇಟೆ, ಜೋಶಿ ಓಣಿ, ಶುಕ್ರವಾರಪೇಟೆ, ಜನತಾ ಪ್ಲಾಟ್‌, ಕಡಕೋಳ ಪೊಲೀಸ್‌ ವಸತಿ ಗೃಹ ಹಾಗೂ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಅಹಮದ್‌ ನಗರ, ಶಿಗ್ಗಾವಿಯ ಅಂಬೇಡ್ಕರ್‌ ನಗರ, ಹಳೇಬಂಕಾಪುರ ಗ್ರಾಮಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಿವೆ. 

ವ್ಯಕ್ತಿ ಸಾವು: ಹಾವೇರಿ ನಗರದ ಗುರುಭವನ ಹತ್ತಿರದ ಕೊರವರ ಓಣಿಯ 56 ವರ್ಷದ ಪುರುಷ (ಪಿ –178852) ಆಗಸ್ಟ್‌ 7ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಅವರ ಮೂಗಿನ ದ್ರವವನ್ನು ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮುಖಾಂತರ ಪರೀಕ್ಷಿಸಿದ್ದು, ಕೋವಿಡ್‌–19 ದೃಢಪಟ್ಟಿರುತ್ತದೆ. ಆಗಸ್ಟ್‌ 9ರಂದು ಮೃತಪಟ್ಟಿದ್ದಾರೆ. ಕೋವಿಡ್‌ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 

ಗುಣಮುಖ: ಸವಣೂರು–7, ಶಿಗ್ಗಾವಿ–28, ರಾಣೆಬೆನ್ನೂರು–1, ಹಾವೇರಿ–14, ಬ್ಯಾಡಗಿ–1, ಹಾನಗಲ್‌–3 ಮತ್ತು ಹಿರೇಕೆರೂರು ತಾಲ್ಲೂಕಿನ 15 ಮಂದಿ ಸೇರಿದಂತೆ ಒಟ್ಟು 69 ಮಂದಿಯನ್ನು ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಮಾಡಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು