ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲನೆ ಮಾಡದ ಮಗನಿಂದ ತಾಯಿಗೆ ಆಸ್ತಿ ಕೊಡಿಸಿದ ಎ.ಸಿ

ಭಕ್ಷೀಸ್‌ ಪತ್ರ ರದ್ದತಿಗೆ ಆದೇಶ
Last Updated 23 ಜನವರಿ 2021, 16:39 IST
ಅಕ್ಷರ ಗಾತ್ರ

ಹಾನಗಲ್: ಮನೆಯ ಆಸ್ತಿಯನ್ನು ತನ್ನ ಹೆಸರಿಗೆ ಭಕ್ಷೀಸ್‌ ನೋಂದಣಿ ಪತ್ರ ಮಾಡಿಸಿಕೊಂಡ ಬಳಿಕ ತಾಯಿಯ ಪಾಲನೆ ಮಾಡದ ಮಗನಿಂದ ಮರಳಿ ತಾಯಿಗೆ ಆಸ್ತಿಯನ್ನು ಕೊಡುವಂತೆ ಸವಣೂರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಫಕ್ಕೀರವ್ವ ಹನಕನಹಳ್ಳಿ ಎಂಬ ವೃದ್ಧೆ ಸವಣೂರ ಉಪವಿಭಾಗಾಧಿಕಾರಿಗಳಲ್ಲಿ ಮೊರೆ ಹೋಗಿದ್ದರು. ತನ್ನ ಮಗನ ಹೆಸರಿಗೆ ಭಕ್ಷೀಸ್ ಮಾಡಿದ ನೋಂದಾಯಿತ ಪತ್ರವನ್ನು ರದ್ದುಪಡಿಸಲು ಮನವಿ ಮಾಡಿಕೊಂಡಿದ್ದರು.

ವೃದ್ಧೆಯ 8 ಪುತ್ರರ ಪೈಕಿ ಚನ್ನಬಸಪ್ಪ ಎಂಬಾತನ ಹೆಸರಿಗೆ 2011ರಸೆಪ್ಟೆಂಬರ್‌ 28ರಂದು ಭಕ್ಷೀಸ್‌ ಪತ್ರವನ್ನು ನೋಂದಣಿ ಮಾಡಿಸಿದ್ದರು. ಆಲದಕಟ್ಟಿ ಗ್ರಾಮದ ವಿ.ಪಿ.ವಿ. ಆಸ್ತಿ ನಂ.285 ಮನೆ ಹಾಗೂ ಖುಲ್ಲಾ ಜಾಗವು ಭಕ್ಷೀಸ್‌ಪತ್ರದಲ್ಲಿ ನಮೂದಿತ ಆಸ್ತಿಯಾಗಿತ್ತು.

ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ವೃದ್ಧೆಯ ಪರವಾಗಿ ಆದೇಶ ನೀಡಿದ್ದಾರೆ. ಭಕ್ಷಿಸ್ ಪತ್ರ ರದ್ದುಪಡಿಸಲು ಸೂಚಿಸಿದ್ದಾರೆ.

ಫಕ್ಕೀರವ್ವ ಹನಕನಹಳ್ಳಿ ಹೆಸರಿಗೆ ಆದಲಕಟ್ಟಿ ಗ್ರಾಮದ ಜಮೀನುಗಳ ಹಕ್ಕು ಪುನರ್ ದಾಖಲಿಸಲು ಉಪ ನೊಂದಣಾಧಿಕಾರಿಗೆ ಸೂಚಿಸಿದ್ದಾರೆ. ನೋಂದಣಿ ಆಧಾರದಂತೆ ಖಾತೆ ಬದಲಾವಣೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದಾರೆ.

ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿಯ ಅಧ್ಯಕ್ಷರು ಆಗಿರುವ ಸವಣೂರ ಉಪವಿಬಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರ ಆದೇಶ ಪ್ರತಿ ಇದೇ ತಿಂಗಳು 20ರಂದು ವೃದ್ಧೆ ಫಕ್ಕೀರವ್ವ ಅವರ ಕೈಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT