ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮರ್ಶಾತ್ಮಕ ಚಿಂತನೆ ಅಳವಡಿಸಿಕೊಳ್ಳಿ’

Last Updated 19 ಜನವರಿ 2021, 15:07 IST
ಅಕ್ಷರ ಗಾತ್ರ

ಹಾವೇರಿ: ‘ವಿದ್ಯಾರ್ಥಿಗಳು ಜ್ಞಾನವನ್ನು ಕಲಿಕೆಗೆ ಮಾತ್ರ ಮೀಸಲಾಗಿರಿಸದೇ ಬದುಕಿನ ಜೊತೆ ಅನ್ವಯಿಸಿಕೊಳ್ಳಬೇಕು. ಪ್ರತಿಯೊಂದು ವಿಷಯವನ್ನು ಪ್ರಾಯೋಗಿಕವಾಗಿ ವಿಮರ್ಶಾತ್ಮಕ ಚಿಂತನೆಗೆ ಅಳವಡಿಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ಸಿಗುತ್ತದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಎಸ್.ಎಂ. ಶಿವಪ್ರಸಾದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜನೆಯಲ್ಲಿ ಆಯೋಜನೆಗೊಂಡಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೋರುವ ತಾಂತ್ರಿಕ ಸಮಸ್ಯೆಗಳ ನಿವಾರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನ ಸೌಂದರ್ಯಾನ್ವೇಷಕ ಮತ್ತು ಬೌದ್ಧಿಕ ಚಟುವಟಿಕೆಗಳ ಸಂಯೋಜನೆಯೇ ವಿಜ್ಞಾನ. ಆದ್ದರಿಂದ ಅತ್ಯಂತ ಶ್ರೇಷ್ಠವಾದ ಕಲೆ ಮತ್ತು ಶಿಕ್ಷಣವಾಗಿದೆ. ವಿದ್ಯಾರ್ಥಿಗಳಿಗೆ ಬದುಕಿನ ಸಂಯೋಜನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮಾನಸಿಕ ಮತ್ತು ಬೌದ್ಧಿಕ ಸ್ಥಿಮಿತತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಕಾರಿಗಳಾಗಿವೆ. ಅವುಗಳಲ್ಲಿ ಪಾಲ್ಗೊಳ್ಳುವವರು ಎದುರಿಸುವ ಹಲವಾರು ರೀತಿಯ ತಾಂತ್ರಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಕುರಿತು ಪ್ರತಿಯೊಬ್ಬರೂ ಕೂಲಂಕಷವಾಗಿ ಅವಲೋಕಿಸುವ ಅಗತ್ಯವಿದೆ’ ಎಂದರು.

ಪ್ರಾಚಾರ್ಯ ಡಾ.ಎಂ.ಎಸ್. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಪಿ.ಸಿ.ಜಾಬಿನ್‌ ಕಾಲೇಜಿನ ನಿವೃತ್ತ ಎನ್.ಸಿ.ಸಿ. ಅಧಿಕಾರಿ ಡಾ.ಜಿ.ಬಿ. ಕಲಕೋಟಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಸವರಾಜ ಮಾಸೂರ, ಪ.ಪೂ. ಪ್ರಾಚಾರ್ಯ ಪ್ರೊ.ಜೆ.ಆರ್. ಸಿಂಧೆ, ಐಕ್ಯೂಎಸಿ ಸಂಯೋಜಕ ಡಾ.ಎಸ್.ವಿ. ಮಡವಾಳೆ, ನ್ಯಾಕ್ ಸಂಯೋಜಕ ಡಾ.ಬಿ.ಎನ್. ವಾಸುದೇವನಾಯ್ಕ ಇದ್ದರು. ಪ್ರೊ.ಡಿ.ಎ. ಕೊಲ್ಲಾಪುರೆ ಸ್ವಾಗತಿಸಿದರು. ಪ್ರೊ.ಎಸ್.ಜಿ. ಹುಣಸಿಕಟ್ಟಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT