ಹಾವೇರಿ: ಅಪಾಯದಲ್ಲಿರುವ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರು–ಮಕ್ಕಳ ರಕ್ಷಣೆಗಾಗಿ ‘ಅಕ್ಕ ಪಡೆ’ ರಚಿಸಲಾಗಿದ್ದು, ಈ ಪಡೆಗೆ ನೀಡಿರುವ ಗಸ್ತು ವಾಹನದ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ನಗರದಲ್ಲಿ ನಿರ್ಮಿಸಿರುವ ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿದ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಶಿವಾನಂದ ಪಾಟೀಲ, ಅಕ್ಕ ಪಡೆಯ ವಾಹನವನ್ನು ವೀಕ್ಷಿಸಿ ಬಳಕೆಗೆ ಮುಕ್ತಗೊಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಅಕ್ಕ ಪಡೆ ರಚಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವಾಹನ ನೀಡಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಎರಡು ಸರದಿಯಲ್ಲಿ ಗೃಹರಕ್ಷಕಿಯವರು ವಾಹನದ ಮೂಲಕ ಗಸ್ತು ತಿರುಗಲಿದ್ದಾರೆ. ವಾಹನದ ಮೇಲೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಭಾವಚಿತ್ರವನ್ನು ಹಾಕಲಾಗಿದೆ.

ಶಾಲೆ, ಕಾಲೇಜು, ಮಹಿಳಾ–ವಿದ್ಯಾರ್ಥಿನಿಯರ ಹಾಸ್ಟೆಲ್ಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ಸ್ಥಳಗಳು, ಸಿನಿಮಂದಿರ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸಂಚರಿಸಲಿದೆ. ಯಾವುದಾದರೂ ಮಹಿಳೆ ಅಥವಾ ಮಕ್ಕಳಿಗೆ ತೊಂದರೆಯಾದರೆ, ದೌರ್ಜನ್ಯವಾದರೆ ಸ್ಥಳಕ್ಕೆ ಹೋಗಿ ಅವರನ್ನು ಅಕ್ಕಪಡೆ ರಕ್ಷಿಸಲಿದೆ.

‘ಜಿಲ್ಲೆಯಲ್ಲಿ ಯಾರಿಗಾದರೂ ತೊಂದರೆ ಉಂಟಾದರೆ, ಅಕ್ಕ ಪಡೆಯ ಸಹಾಯಕ್ಕಾಗಿ 112 (ತುರ್ತು ಸಹಾಯವಾಣಿ), 181 (ಮಹಿಳಾ ಸಹಾಯವಾಣಿ) ಹಾಗೂ 1098 (ಮಕ್ಕಳ ಸಹಾಯವಾಣಿ) ಸಂಖ್ಯೆಗೆ ಕರೆ ಮಾಡಬಹುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.