2024ರಲ್ಲಿ ನಡೆಸಿದ್ದ ಕಾಮಗಾರಿ ಕಳಪೆಯಾಗಿದ್ದರಿಂದ ಏರಿ ಒಡೆದಿದೆ. ತಪ್ಪಿತಸ್ಥ ಗುತ್ತಿಗೆದಾರ–ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು ಅತ್ತಿಕಟ್ಟೆ ಗ್ರಾಮಸ್ಥರು
ಸೇತುವೆ ಭಾಗಶಃ ಮುಳುಗಡೆ
ಜಿಲ್ಲೆಯಲ್ಲಿ ಬಿಡುವು ನೀಡುತ್ತಲೇ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಹಾವೇರಿ ತಾಲ್ಲೂಕಿನ ಕರ್ಜಗಿ ಹಾಗೂ ಚಿಕ್ಕಮಗದೂರು ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಶುಕ್ರವಾರ ಭಾಗಶಃ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟದ ಜಿಲ್ಲೆಯಲ್ಲಿ ಮಳೆ ನೀರಾಗುತ್ತಿದೆ. ಅದೇ ನೀರು ವರದಾ ನದಿ ಮೂಲಕ ಜಿಲ್ಲೆಯಲ್ಲಿ ಹರಿಯುತ್ತಿದೆ. ಇದೇ ವರದಾ ನದಿಗೆ ಅಡ್ಡವಾಗಿ ಕರ್ಜಗಿ–ಚಿಕ್ಕಮಗದೂರು ನಡುವೆ ಕಿರು ಸೇತುವೆ ನಿರ್ಮಿಸಲಾಗಿದೆ. ವರದಾ ನದಿಯಲ್ಲಿ ನೀರು ಹೆಚ್ಚಳವಾಗಿದ್ದು ಸೇತುವೆ ಭಾಗಶಃ ಜಲಾವೃತಗೊಂಡಿದೆ. ಸೇತುವೆಯಲ್ಲಿ ನೀರು ಹರಿಯುತ್ತಿದ್ದ ಸಂದರ್ಭದಲ್ಲಿಯೇ ಕೆಲವರು ಬೈಕ್‌ಗಳಲ್ಲಿ ಸಂಚರಿಸಿದ್ದಾರೆ.