ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಕಿ ತಗುಲಿ ಹೊತ್ತಿ ಉರಿದ ಬೈಕ್

Published : 20 ಸೆಪ್ಟೆಂಬರ್ 2024, 8:31 IST
Last Updated : 20 ಸೆಪ್ಟೆಂಬರ್ 2024, 8:31 IST
ಫಾಲೋ ಮಾಡಿ
Comments

ಹಿರೇಕೆರೂರು (ಹಾವೇರಿ ಜಿಲ್ಲೆ): ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೈಕ್ ತಗುಲಿ, ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ಎಂಜಿನಿಯರ್ ರಾಮಚಂದ್ರ ಬಿಜಾಪುರ ಅವರಿಗೆ ಸೇರಿದ ಬೈಕ್ ಇದಾಗಿದೆ.

ತಾಲ್ಲೂಕು ಕಚೇರಿಯಲ್ಲಿ ಅಂತರ್ಜಾಲದ ನೆಟ್‌ವರ್ಕ್ ಸಮಸ್ಯೆ ಆಗಿತ್ತು. ಅದನ್ನು ಸರಿಪಡಿಸಲೆಂಸು ರಾಮಚಂದ್ರ ಅವರು ಕಚೇರಿಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ.

ಕೆಲಸ ಮುಗಿಸಿ ರಾಮಚಂದ್ರ ಅವರು ಹೊರಗೆ ಬಂದು ಬೈಕ್ ಕೀ ಆನ್ ಮಾಡಿದ್ದರು. ಇದೇ ಸಂದರ್ಭದಲ್ಲಿಯೇ ಬೆಂಕಿ ಹೊತ್ತಿಕೊಂಡಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ. ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT