ಹಾವೇರಿ: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ರಕ್ತದಾನ ಶಿಬಿರ’ ನಡೆಸಲು ಖಾಸಗಿ ಬ್ಲಡ್ ಬ್ಯಾಂಕ್ಗಳಿಗೆ ಅವಕಾಶ ನೀಡುವ ಮೂಲಕ ಸರ್ಕಾರದ ಅಧಿಕೃತ ‘ಜಿಲ್ಲಾ ರಕ್ತನಿಧಿ ಕೇಂದ್ರ’ವನ್ನು ಕಡೆಗಣಿಸಿ, ಖಾಸಗಿ ಸಂಸ್ಥೆಗಳಿಗೆ ಮಣೆಹಾಕಲಾಗಿದೆ.

ಜಿಲ್ಲೆಯ ಎರಡು ಖಾಸಗಿ ಬ್ಲಡ್ ಬ್ಯಾಂಕ್ಗಳಿಗೆ ರಾಣೆಬೆನ್ನೂರು, ಹಿರೇಕೆರೂರು, ಸವಣೂರು ಮತ್ತು ಶಿಗ್ಗಾವಿ ಈ ನಾಲ್ಕು ತಾಲ್ಲೂಕುಗಳ 44 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತದಾನ ಶಿಬಿರ ನಡೆಸಲು ‘ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದಿಂದ ವೇಳಾಪಟ್ಟಿ ಹಾಕಿಕೊಡಲಾಗಿದೆ. ಈ ಶಿಬಿರಕ್ಕೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪಿಡಿಒಗಳು ನೆರವು ನೀಡಲು ಸೂಚನೆ ನೀಡಲಾಗಿದೆ.

ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಹಾವೇರಿ, ಬ್ಯಾಡಗಿ, ಹಾನಗಲ್ ಈ ಮೂರು ತಾಲ್ಲೂಕುಗಳ 33 ಪಿಎಚ್ಸಿಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದ ನಾಲ್ಕು ತಾಲ್ಲೂಕುಗಳ ಪಿಎಚ್ಸಿಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿರುವ ಕಾರಣ, ಜಿಲ್ಲಾ ಕೇಂದ್ರಕ್ಕೆ ಬರಬೇಕಾಗಿದ್ದ ಜೀವದ್ರವ್ಯ, ಖಾಸಗಿ ಬ್ಲಡ್ ಬ್ಯಾಂಕ್ಗಳ ಪಾಲಾಗಲಿದೆ.

ರಕ್ತದ ಕೊರತೆ ಸಂಭವ: ಖಾಸಗಿ ಬ್ಲಡ್ ಬ್ಯಾಂಕ್ಗಳು ಪಿಎಚ್ಸಿಗಳಲ್ಲಿ ಸಂಗ್ರಹವಾದ ಒಟ್ಟು ರಕ್ತದ ಪ್ರಮಾಣದಲ್ಲಿ ಶೇ 25ರಷ್ಟನ್ನು ಮಾತ್ರ ‘ಜಿಲ್ಲಾ ರಕ್ತನಿಧಿ ಕೇಂದ್ರ’ಕ್ಕೆ ಕೊಟ್ಟು, ಶೇ 75ರಷ್ಟು ರಕ್ತವನ್ನು ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಇದರಿಂದ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಉಂಟಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಉಚಿತವಾಗಿ ರಕ್ತ ಪಡೆಯುತ್ತಿದ್ದ ಗರ್ಭಿಣಿಯರು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳು, ಥಲಸೇಮಿಯಾ ರೋಗಿಗಳು ತೊಂದರೆಗೆ ಸಿಲುಕುತ್ತಾರೆ ಎಂಬ ಆತಂಕತಲೆದೋರಿದೆ.

ಮದರ್ ಯುನಿಟ್: ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಯಲ್ಲಿರುವ ಏಳು ರಕ್ತನಿಧಿ ಕೇಂದ್ರಗಳಿಗೆ ‘ಮದರ್ ಯುನಿಟ್’ ಎನಿಸಿದ ಜಿಲ್ಲಾ ರಕ್ತನಿಧಿ ಕೇಂದ್ರದಿಂದಲೇ ರಕ್ತ ಪೂರೈಕೆಯಾಗುತ್ತದೆ. ಬಡಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆಗೆ ದಾಖಲಾಗುತ್ತಾರೆ. ಜಿಲ್ಲಾ ರಕ್ತನಿಧಿ ಕೇಂದ್ರದಿಂದ ಶೇ 60ರಷ್ಟು ಹೆರಿಗೆಗೆ, ಶೇ 30ರಷ್ಟು ಅನಿಮಿಯಾ ಮತ್ತು ಇತರೆ ರೋಗಿಗಳಿಗೆ, ಶೇ 5ರಷ್ಟು ಥಲಸೇಮಿಯಾ ರೋಗಿಗಳಿಗೆ ಹಾಗೂ ಶೇ 5ರಷ್ಟು ಎಚ್ಐವಿ ಬಾಧಿತರಿಗೆ ರಕ್ತ ಪೂರೈಕೆಯಾಗುತ್ತದೆ.

ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಪ್ರಶಸ್ತಿ: ಹಾವೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರವು ಅತಿ ಹೆಚ್ಚು ಸ್ವಯಂಪ್ರೇರಿತ ರಕ್ತ ಸಂಗ್ರಹಣೆ ಮಾಡಿದ್ದಕ್ಕಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ನಲ್ಲಿ ನಡೆದ ರಾಷ್ಟ್ರೀಯ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ‘ರಾಜ್ಯ ಮಟ್ಟದ ಪ್ರಶಸ್ತಿ’ ನೀಡಲಾಗಿದೆ. ಈ ಘಟಕದಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಿ, ಈ ರಕ್ತ ವಿದಳನಾ ಘಟಕಕ್ಕೆ ಶಕ್ತಿ ತುಂಬಬೇಕು ಎಂಬುದು ಸ್ವಯಂಪ್ರೇರಿತ ರಕ್ತದಾನಿಗಳ ಮನವಿ.

ಲಾಭದ ಮೇಲೆ ಕಣ್ಣು!

350 ಎಂ.ಎಲ್. ರಕ್ತದಿಂದ ಸುಮಾರು 6 ಸಾವಿರ ಪ್ಲೇಟ್ಲೆಟ್, 200 ಎಂ.ಎಲ್. ಪ್ಲಾಸ್ಮಾ ದೊರೆಯುತ್ತದೆ. ಒಂದು ಲೀಟರ್ ಪ್ಲಾಸ್ಮಾಕ್ಕೆ ಮಾರುಕಟ್ಟೆಯಲ್ಲಿ ₹3,500ರಿಂದ ₹4,000 ದರವಿದೆ. ಈ ಪ್ಲಾಸ್ಮಾವನ್ನು ಖಾಸಗಿ ಔಷಧ ತಯಾರಿಕಾ ಕಂಪನಿಗಳಿಗೆ ಮಾರಾಟ ಮಾಡಿ, ಖಾಸಗಿ ಬ್ಲಡ್ ಬ್ಯಾಂಕ್ಗಳು ದೊಡ್ಡ ಲಾಭ ಪಡೆಯುತ್ತವೆ. ಹೀಗಾಗಿ ಪಿಎಚ್ಸಿಗಳಲ್ಲಿ ಶಿಬಿರ ಆಯೋಜಿಸಲು ಸರ್ಕಾರದ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು ಎಂಬುದು ಸ್ವಯಂಪ್ರೇರಿತ ರಕ್ತದಾನಿಗಳ ಒತ್ತಾಯ.

ಸಿಬ್ಬಂದಿ, ವಾಹನ ಕೊರತೆ

ಹಾವೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ‘ಟೆಕ್ನಿಕಲ್ ಸೂಪರ್ವೈಸರ್’ ಹುದ್ದೆ ಎರಡೂವರೆ ವರ್ಷದಿಂದ ಖಾಲಿ ಇದೆ. ರಕ್ತನಿಧಿ ಕೇಂದ್ರವನ್ನು ನಡೆಸಲು ಈ ಹುದ್ದೆ ಅಗತ್ಯವಾಗಿದ್ದರೂ, ನೇಮಕಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಕಡೆ ಸಂಗ್ರಹವಾದ ರಕ್ತವನ್ನು ಸಾಗಣೆ ಮಾಡಲು ಅಗತ್ಯವಾದ ‘ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನ’ (ಬಿಸಿಟಿವಿ) ಇಲ್ಲದ ಕಾರಣ ಸಿಬ್ಬಂದಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಾಹನ ಜಿಲ್ಲೆಗೆ ಮಂಜೂರಾದರೆ, ವಾಹನದೊಂದಿಗೆ ವೈದ್ಯ, ಸ್ಟಾಫ್ ನರ್ಸ್, ತಾಂತ್ರಿಕ ಅಧಿಕಾರಿ, ಅಟೆಂಡರ್ ಮತ್ತು ಚಾಲಕರ ತಂಡದ ಸೌಲಭ್ಯವೂ ದೊರೆತು, ರಕ್ತದಾನ ಶಿಬಿರ ನಡೆಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ.

ಪಿಎಚ್ಸಿಗಳಲ್ಲಿ ನಡೆಸಿದ ಶಿಬಿರದಿಂದ ಸಂಗ್ರಹವಾದ ಶೇ 25ರಷ್ಟು ರಕ್ತವನ್ನು ಖಾಸಗಿ ಬ್ಲಡ್ ಬ್ಯಾಂಕ್ಗಳು ಜಿಲ್ಲಾ ರಕ್ತ ನಿಧಿ ಕೇಂದ್ರಕ್ಕೆ ನೀಡುತ್ತವೆ

– ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಿಎಚ್ಒ, ಹಾವೇರಿ

ರಕ್ತದ ಕೊರತೆ ನೀಗಿಸಲು ಖಾಸಗಿ ಬ್ಲಡ್ ಬ್ಯಾಂಕ್ಗಳಿಗೆ ಅವಕಾಶ ಕಲ್ಪಿಸಿದ್ದು, ರಕ್ತ ಶೇಖರಣೆಯ ಗುರಿ ಸಾಧನೆಗೆ ನೆರವಾಗಲಿದೆ

– ಡಾ.ನೀಲೇಶ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.