ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆ ನಿರ್ಮಾಣ: ವೆಚ್ಚದ ವಿವರ ಸಲ್ಲಿಸಿ

Last Updated 27 ಜನವರಿ 2021, 1:40 IST
ಅಕ್ಷರ ಗಾತ್ರ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆ ನಿರ್ಮಾಣ ಹಾಗೂ ಸಮನಾಂತರ ವೇದಿಕೆಗಳ ನಿರ್ಮಾಣ ಕುರಿತಂತೆ ವಿನ್ಯಾಸ ಅಂತಿಮಗೊಳಿಸಿ, ಅಂದಾಜು ವೆಚ್ಚದ ವಿವರವನ್ನು ತಯಾರಿ ಸಲ್ಲಿಸುವಂತೆ ಶಾಸಕ ನೆಹರುಓಲೇಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವೇದಿಕೆ ನಿರ್ಮಾಣ ಹಾಗೂ ವೇದಿಕೆ ನಿರ್ವಹಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳು ಹಾಗೂ ಅಧಿಕಾರೇತರ ಸದಸ್ಯರಿಂದ ಸಲಹೆಗಳನ್ನು ಪಡೆದರು.

ವೇದಿಕೆ ನಿರ್ಮಾಣದ ಸ್ಥಳದ ಸ್ವಚ್ಛತೆ, ಸಮತಟ್ಟು ಹಾಗೂ ವೇದಿಕೆಯ ವಿನ್ಯಾಸಗಳು ಸಿದ್ಧಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಸಮ್ಮೇಳನಗಳ ವೇದಿಕೆಯ ಮಾಹಿತಿಯನ್ನು ಪಡೆದುಕೊಳ್ಳಿ.ವೇದಿಕೆ ನಿರ್ವಹಣೆಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸ್ಕೌಟ್ ಮತ್ತು‌ ಗೈಡ್ಸ್, ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ಮೂಲಕ ಕಾರ್ಯಕ್ರಮದ ಸಂಯೋಜನೆಗೆ ನಿಯೋಜಿಸಬೇಕು ಎಂದರು.

ವೇದಿಕೆಯ ನಿರ್ಮಾಣದ ಜೊತೆಗೆ ಹಾವೇರಿ ನಗರದ ಪ್ರವೇಶದ ಎಲ್ಲ ಮುಖ ದ್ವಾರಗಳಲ್ಲಿ ಕಮಾನುಗಳ ನಿರ್ಮಾಣ, ಚಿತ್ರಬರಹ ಹಾಗೂ ಮಾರ್ಗಸೂಚಿ ಫಲಕಗಳನ್ನು ಬರೆಸುವುದರ ಮೂಲಕ ಗೋಡೆಗಳನ್ನು ಅಲಂಕರಿಸಬೇಕು. ನಗರದ ರಸ್ತೆಗಳ ದುರಸ್ತಿ, ಸಾಮೂಹಿಕ ಶ್ರಮದಾನ ಮೂಲಕ ನಗರ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT