ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಳವಳ್ಳಿ | ಮೈ ನವಿರೇಳಿಸಿದ ಹೋರಿ ಹಬ್ಬ

300 ಕ್ಕೂಅಧಿಕ ಹೋರಿಗಳು ಸ್ಪರ್ಧೆಯಲ್ಲಿ ಭಾಗಿ
Published 19 ಡಿಸೆಂಬರ್ 2023, 14:48 IST
Last Updated 19 ಡಿಸೆಂಬರ್ 2023, 14:48 IST
ಅಕ್ಷರ ಗಾತ್ರ

ತಿಳವಳ್ಳಿ: ಬಯಲುಸೀಮೆ ಹಾಗೂ ಮಲೆನಾಡು ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಿಳವಳ್ಳಿ ಸಮೀಪದ ಹುಲಗಡ್ಡಿಯಲ್ಲಿ ನಡೆಯಿತು.

ದೀಪಾವಳಿ ಹಬ್ಬದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲ್ಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲ್ಲೂಕು, ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಅಖಾಡದಲ್ಲಿ ರಾಣೇಬೆನ್ನೂರು ಕಾ ರಾಜಾ, ತಿಳವಳ್ಳಿ ಅಂಬೇಡ್ಕರ್‌ ಹುಲಿ, ತಿಳವಳ್ಳಿ ಜಾಕಿ, ಮೆಂಟಲ್ ರಾಣಿ, ತ್ರಿಶೂಲ, ಕೆಂಚಾಂಬಾ ಎಕ್ಸ್‌ಪ್ರೇಸ್, ಹಾನಗಲ್ಲ ರಾಜಕುಮಾರ, ಆನವಟ್ಟಿ ದೊರೆ, ಮುಂಡಗೋಡ ಬಲರಾಮ, ಎಂ.ಎಸ್.ಬಿ ಸರ್ಕಾರ, 7 ಸ್ಟಾರ್ ಸುಲ್ತಾನ, ಹಾವೇರಿ ಬೆಟ್ಟದ ಹುಲಿ, ದೇವಗಿರಿ ಸಿಂಹಾದ್ರಿ, ಶ್ರೀಗಂಧ, ಮಹಾರಾಜ, ದಂಗೆ, ಬ್ಯಾಡಗಿ ರಾಷ್ಟ್ರಪತಿ, ಹಾವೇರಿ ಹುಲಿ, ಸಿ.ಜಿ.ಬಿ ಸಾಹುಕಾರ, ಓಂಕಾರ, ಜೈಹನುಮಾನ, ರೋಲೆಕ್ಸ್ 107, ಮಾಯಮ್ಮ ಎಕ್ಸ್‌ಪ್ರೇಸ್, ಹಿಂದೂ ಹುಲಿ, ಮುತ್ತೂರು ದ್ರೋಣ, ಭೂ ವೀರಾಪೂರದ ಅಗಸ್ತ್ಯ, ಮುತ್ತಿನಕೊಪ್ಪದ ಚಿನ್ಮಯಿ, ವಾಸನದ ಕೆ.ಡಿ, ಕುರುಕ್ಷೇತ್ರ, ಬಹದ್ದೂರ, ರಾಜರತ್ನ, ಗೌಡ್ರಗುಳಿ, ಹಿಂದೂ ಕೇಸರಿ, ರಾಕ್ಷಸ, ಬೆಟಗೇರಿ ಡಾನ್‌, ಬಾರಂಗಿ ಮಹಾವೀರ, ಅದಿಪತಿ, ಪುನೀತ್‌ ರಾಜ್‌ಕುಮಾರ್‌ ಸವಿನೆನಪಿಗಾಗಿ ಪವರ್‌ ಸ್ಟಾರ್‌ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.

ಹೋರಿ ಹಬ್ಬ ಆಯೋಜಿಸಿದ್ದ ಹುಲಗಡ್ಡಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಿ ಬಹುಮಾನ ನೀಡಲಾಯಿತು.

ತಿಳವಳ್ಳಿ ಸಮೀಪದ ಹುಲಗಡ್ಡಿಯಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ
ತಿಳವಳ್ಳಿ ಸಮೀಪದ ಹುಲಗಡ್ಡಿಯಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT