ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸವಣೂರು | ಬಾರದ ಉದ್ರಿ ಹಣ: ವ್ಯಾಪಾರಸ್ಥ ಆತ್ಮಹತ್ಯೆ

Published 18 ಜೂನ್ 2024, 16:19 IST
Last Updated 18 ಜೂನ್ 2024, 16:19 IST
ಅಕ್ಷರ ಗಾತ್ರ

ಸವಣೂರು: ಕಿರಾಣಿ ಸಾಮಾನುಗಳನ್ನು ಉದ್ರಿಯಾಗಿ ಪಡೆದುಕೊಂಡು ಹೋದ ಚಿಲ್ಲರೆ ವ್ಯಾಪಾರಸ್ಥರು ಅದರ ಹಣವನ್ನು ನೀಡದೇ ಹೋದ ಕಾರಣ ಕಿರಾಣಿ ವ್ಯಾಪಾರಸ್ಥರೊಬ್ಬರು ಮನನೊಂದು ಕಿರಾಣಿ ಅಂಗಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ರಾಮದೇವರ ದೇವಸ್ಥಾನ ಓಣಿಯ ನಿವಾಸಿ, ಶಂಕರ ಚಂದ್ರಪ್ಪ ಗೌಡಣ್ಣನವರ (33) ಅತ್ಮಹತ್ಯೆ ಮಾಡಿಕೊಂಡವರು.

ಪಟ್ಟಣದಲ್ಲಿ ‘ಮಂಜುನಾಥ ಕಿರಾಣಿ ಸ್ಟೊರ್ಸ್‌’ ಹೆಸರಿನಲ್ಲಿ ಅಂಗಡಿ ತೆರೆದಿದ್ದು, ಚಿಲ್ಲರೆ ವ್ಯಾಪಾರಸ್ಥರಿಗೆ ಉದ್ರಿಯಾಗಿ ₹ 20 ಲಕ್ಷದಿಂದ ₹ 25 ಲಕ್ಷಗಳಷ್ಟು ಕಿರಾಣಿ ಸಾಮಾನುಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. ಸವಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT