ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡಸ| ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮನವಿ

Published 3 ಆಗಸ್ಟ್ 2023, 15:49 IST
Last Updated 3 ಆಗಸ್ಟ್ 2023, 15:49 IST
ಅಕ್ಷರ ಗಾತ್ರ

ತಡಸ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನರ ಮತ್ತು ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಕರವೇ ಸದಸ್ಯರು ಪಿಎಸ್‌ಐ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ತಡಸವು ತಾಲ್ಲೂಕಿನ ಪ್ರಮುಖ ಕೇಂದ್ರವಾಗಿದೆ. ಇದು ಜನನಿಬಿಡ ವ್ಯಾಪಾರಿ, ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಜನ, ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಸಿಸಿಟಿವಿ ಅಗತ್ಯವಾಗಿದೆ. ಈಚಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ ಎಂದು ದೂರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷಗೌಡ ಪಾಟೀಲ, ಗ್ರಾಮ ಘಟಕ ಅಧ್ಯಕ್ಷ ಗಂಗಾಧರ ಬೆಂಡಲಗಟ್ಟಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭು ನಂಜಪ್ಪನವರ ಮತ್ತು ತಡಸ ಪೊಲೀಸ್‌ ಠಾಣಾ ಎ.ಎಸ್.ಐ. ಸರೋಜಾ ಅಣ್ಣಿಗೇರಿ ಮನವಿ ಸ್ವೀಕರಿಸಿದರು.

ಕರವೇ ಗ್ರಾಮ ಘಟಕದ ಉಪಾಧ್ಯಕ್ಷ ಮೈನುಸಾಭ ಹಂಚನಾಳ, ಗೌರವಾಧ್ಯಕ್ಷ ಆಶೀಂ ಕಲಘಟಗಿ, ಕಾರ್ಯದರ್ಶಿಶೇಖಪ್ಪ ಹರಿಜನ, ರಾಣಪ್ಪಾ ವಾಟಕರ್,ಬಾಬುಲಾಲ ತಾಸೆವಾಲ, ಮಕಬೂಲಸಾಬ ಹುಬ್ಬಳ್ಳಿ, ಸಿದ್ದಪ್ಪ ಹರಿಜನ, ನಿಂಗಪ್ಪ ಹಡಪದ, ಬಾಬಾಸಾಬ ಮಿಟಾಯಗಾರ, ಅನ್ವರ ಕೊಲ್ಲಾಪೂರ, ಮಂಜು ಪೂಜಾರ, ಮಂಜು ಬಜಂತ್ರಿ, ಗ್ರಾಮ ಪಂಚಾಯತಿ ಸದಸ್ಯರಾದ ಅಹ್ಮದಬಾಸ ಬಳಗಲಿ, ರಮೇಶ ದಾನೆನವರ, ಮಂಜುನಾಥ ನಂಜಪ್ಪನವರ, ಸಹದೇವಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT