ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಪ್ಪ ಶಿವಯೋಗಿಗಳ ಪುಣ್ಯಸ್ಮರಣೆ

Published 5 ಜೂನ್ 2024, 15:06 IST
Last Updated 5 ಜೂನ್ 2024, 15:06 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಜೂನ್ 7 ಮತ್ತು 8ರಂದು ಲಿಂ. ಗುರುಮೂಕಪ್ಪ ಶಿವಯೋಗಿಗಳ 86ನೇ ಪುಣ್ಯಸ್ಮರಣೆ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂನ್ 7ರಂದು ಬೆಳಿಗ್ಗೆ 8 ಗಂಟೆಗೆ ಷಟಸ್ಥಲ ಧ್ವಜಾರೋಹಣ, 9 ಗಂಟೆಗೆ ಜಗನ್ಮಾತೆ ಪಾರ್ವತಿದೇವಿಗೆ ಮಹಿಳೆಯರಿಂದ ಉಡಿ ತುಂಬುವುದು, ಸಂಜೆ 6 ಗಂಟೆಗೆ ಭಕ್ತ ಚಿಂತನಾ ಧರ್ಮಸಭೆ ಹಾಗೂ ‘ಮೂಕೇಶ್ವರ ಸೇವಾ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಜರುಗುವುದು.

ಜೂನ್ 8ರಂದು ಬೆಳಿಗ್ಗೆ 5ಕ್ಕೆ ಗುರುಮೂಕಪ್ಪ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ 9 ಗಂಟೆಗೆ ಮಾಹಾರಥೋತ್ಸವ, ದಾಸೋಹ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT