ಶನಿವಾರ, ಜನವರಿ 23, 2021
27 °C

‘ನಗರದ ಅಭಿವೃದ್ಧಿಗೆ ಬದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ನಗರದ ಅಭಿವೃದ್ಧಿಗೆ ನಗರ ನಿವಾಸಿಗರ ಕಾಳಜಿ ಹಾಗೂ ಸಹಕಾರ ಅಗತ್ಯವಾಗಿದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಇಲ್ಲಿನ ಮೆಹಬೂಬ ನಗರದಲ್ಲಿ ನೂತನವಾಗಿ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ಮೆಹಬೂಬ ನಗರದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಗರದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ, ಸಮರ್ಪಕ ನೀರಿನ ವ್ಯವಸ್ಥೆ ಹಾಗೂ ಮೂಲಸೌಲಭ್ಯ ಒದಗಿಸಿ ಸುಂದರ ನಗರವನ್ನಾಗಿ ಮಾಡಲು ಬದ್ದನಾಗಿದ್ದೇನೆ. ನಗರದ ನಿವಾಸಿಗರು ಸಹಕಾರ ನೀಡಬೇಕು ಹಾಗೂ ಸಮಸ್ಯೆಗಳನ್ನು ಗಮನಕ್ಕೆ ತರಲು ಪ್ರಯತ್ನಿಸಿದಾಗ ಪರಿಹಾರ ಹುಡುಕಲು ಸಾಧ್ಯವಾಗಲಿದೆ. ಮೆಹಬೂಬ ನಗರದಲ್ಲಿ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದು, ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಮುಖಂಡರಾದ ಈರಣ್ಣ ಸಂಗೂರ, ಪರಶುರಾಮ ಹರ್ಲಾಪುರ, ಶಿವರಾಜ ಮತ್ತಿಹಳ್ಳಿ, ನಜೀರಸಾಬ ನದಾಫ, ಅಡಿವೆಪ್ಪ ಯಲವಿಗಿಮಠ, ಹಜರತ ಅಲಿ ಶೇಕಸನದಿ, ಇಶುಫ್ ಹುಲಗೇರಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.