ಹಾವೇರಿ: ಜಿಲ್ಲೆಗೆ ‘ಹತ್ತಿ ಕಣಜ’ವೆಂದು ಹೆಸರು ತಂದುಕೊಟ್ಟಿದ್ದ ರೈತರು, ಇದೀಗ ಹತ್ತಿ ಬೆಳೆಗೆ ವಿದಾಯ ಹೇಳಿದ್ದಾರೆ. ಹೆಚ್ಚಾದ ಖರ್ಚು, ಕೆಲಸಕ್ಕೆ ಸಿಗದ ಆಳುಗಳು ಸೇರಿ ಹಲವು ಸಮಸ್ಯೆ ಎದುರಿಸಿದ್ದ ರೈತರು, ಹತ್ತಿ ಸಹವಾಸವೇ ಬೇಡವೆಂದು ಮೆಕ್ಕೆಜೋಳ ಬೆಳೆಯತ್ತ ವಾಲಿದ್ದಾರೆ.

ಏಕ ದಳ, ದ್ವಿದಳ ಹಾಗೂ ಆಹಾರ ಧಾನ್ಯ ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದ ಜಿಲ್ಲೆಯ ರೈತರು, ವಾಣಿಜ್ಯ ಬೆಳೆಯಾದ ಹತ್ತಿಯತ್ತ ಒಲುವು ತೋರಿದ್ದರು. ಅದಕ್ಕೆ ತಕ್ಕಂತೆ ಕೃಷಿ ಮಾಡಿ, ಹತ್ತಿ ಬೆಳೆಯಲ್ಲಿ ಉತ್ತಮ ಲಾಭವನ್ನೂ ಪಡೆದಿದ್ದರು. ಜಿಲ್ಲೆಯ ಬಯಲು ಸೀಮೆಯಲ್ಲಿ ಸುತ್ತಾಡಿದಾಗ, ಎಲ್ಲ ಜಮೀನಿನಲ್ಲಿ ಶ್ವೇತವರ್ಣದ ಹತ್ತಿ ರಾರಾಜಿಸುತ್ತಿತ್ತು.

ಆದರೆ, ಇತ್ತೀಚಿನ ದಿನಗಳಲ್ಲಿ ಹತ್ತಿ ಎಂಬುದು ಖರ್ಚಿನ ಬೆಳೆಯಾಗಿ ಮಾರ್ಪಟ್ಟಿದೆ. ಜಮೀನು ಹದಗೊಳಿಸುವುದರಿಂದ ಹಿಡಿದು, ಹತ್ತಿ ಕಟಾವು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯುವ ತನಕ ರೈತರು ಸುಸ್ತಾಗುತ್ತಿದ್ದಾರೆ.

ಬೀಜಗಳ ಆಯ್ಕೆ, ಗೊಬ್ಬರ, ಕಳೆ, ಔಷಧಿ... ಹೀಗೆ ನಾನಾ ರೀತಿಯಲ್ಲಿ ಹತ್ತಿ ಬೆಳೆಯ ಪೋಷಣೆ ಮಾಡಬೇಕು. ಆಗಾಗ ಬರುವ ರೋಗಗಳಿಗೂ ಉಪಚಾರ ಮಾಡಬೇಕು. ಇದಕ್ಕೆ ಹೆಚ್ಚು ಹಣ ಹಾಗೂ ಸಮಯ ಬೇಕು. ಇದೇ ಕಾರಣಕ್ಕೆ ರೈತರು, ಹತ್ತಿ ಬೆಳೆಯಿಂದ ವಿಮುಖವಾಗುತ್ತಿದ್ದಾರೆ. ಕಡಿಮೆ ಖರ್ಚು ಹಾಗೂ ಕಡಿಮೆ ಕೆಲಸವಿರುವ ಮೆಕ್ಕೆಜೋಳ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

2025ನೇ ಸಾಲಿನ ಮುಂಗಾರಿನಲ್ಲಿ ಜಿಲ್ಲೆಯ 40,000 ಹೆಕ್ಟೇರ್ನಲ್ಲಿ ಹತ್ತಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ರೈತರು ನಿರಾಸಕ್ತಿ ತೋರಿದ್ದರಿಂದ ಕೇವಲ 11,525 ಹೆಕ್ಟೇರ್ನಲ್ಲಿ ಮಾತ್ರ ಈಗ ಹತ್ತಿ ಬೆಳೆಯಲಾಗಿದೆ. ಗುರಿಗೆ ತಕ್ಕಂತೆ ಕೃಷಿ ಇಲಾಖೆಯವರು, ಬೀಜ ಹಾಗೂ ಗೊಬ್ಬರ ಸಂಗ್ರಹ ಮಾಡಿಟ್ಟುಕೊಂಡಿದ್ದರು. ಆದರೆ, ರೈತರು ಮಾತ್ರ ಹತ್ತಿ ಬೀಜದತ್ತ ತಿರುಗಿಯೂ ನೋಡಿಲ್ಲ.

‘ಮಳೆ ಆಶ್ರಿತದಲ್ಲಿ 35,000 ಹೆಕ್ಟೇರ್ನಲ್ಲಿ ಹಾಗೂ ನೀರಾವರಿ ಆಶ್ರಿತದಲ್ಲಿ 5,000 ಹೆಕ್ಟೇರ್ನಲ್ಲಿ ಹತ್ತಿ ಬೆಳೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಮಳೆ ಆಶ್ರಿತದಲ್ಲಿ 9,292 ಹೆಕ್ಟೇರ್ ಹಾಗೂ ನೀರಾವರಿ ಆಶ್ರಿತದಲ್ಲಿ 2,233 ಹೆಕ್ಟೇರ್ನಲ್ಲಿ ಮಾತ್ರ ಹತ್ತಿ ಬೆಳೆಯಲಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಹತ್ತಿ ಬಳಸಿಕೊಂಡು ಬಟ್ಟೆ ಸೇರಿದಂತೆ ಹಲವು ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹತ್ತಿ ಬೆಳೆ ಪ್ರಮಾಣ ತೀರಾ ಕಡಿಮೆಯಾಗಿದೆ. ಇದರಿಂದಾಗಿ, ಮುಂದಿನ ದಿನಗಳಲ್ಲಿ ಹತ್ತಿಯ ಲಭ್ಯತೆ ಪ್ರಮಾಣವೂ ಕ್ಷೀಣಿಸಲಿದೆ. ಇದು ಹತ್ತಿ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.

‘ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹತ್ತಿ ಬೆಳೆಯಲಾಗುತ್ತಿತ್ತು. ಈಗ ಎಲ್ಲ ಕಡೆಯೂ ಹತ್ತಿ ಬೆಳೆ ಕಡಿಮೆಯಾಗಿದೆ’ ಎಂದರು.

ಜಿಲ್ಲಾ ಕೇಂದ್ರ ಹಾವೇರಿಯ ಗುತ್ತಲ ರಸ್ತೆ, ಒಂದು ಕಾಲದಲ್ಲಿ ಹತ್ತಿ ಮಾರುಕಟ್ಟೆಯಾಗಿತ್ತು. ರಸ್ತೆಯುದ್ದಕ್ಕೂ ರಾಶಿ ರಾಶಿ ಲೆಕ್ಕದಲ್ಲಿ ಹತ್ತಿ ಅಂಡಿಗೆಗಳೇ ಕಾಣಸಿಗುತ್ತಿದ್ದವು. ಇದರ ಜೊತೆಯಲ್ಲಿ ಹತ್ತಿ ಮಾರಾಟಕ್ಕೆಂದು ಪ್ರತ್ಯೇಕ ಎಪಿಎಂಸಿ ಆರಂಭಿಸಲಾಗಿತ್ತು. ಈಗ ಹತ್ತಿ ಅಂಡಿಗೆಗಳು ಮಾಯವಾಗಿವೆ. ಹತ್ತಿ ಮಾರುತ್ತಿದ್ದ ಎಪಿಎಂಸಿ ಸಹ ಬಿಕೋ ಎನ್ನುತ್ತಿದೆ. ಇದನ್ನ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆಯೂ ನಡೆದಿದೆ.

ಬಾಗಿಲು ಮುಚ್ಚಿದ ಜಿನ್ನಿಂಗ್ ಮಿಲ್ಗಳು: ಹತ್ತಿ ಬೆಳೆಯುವ ಪ್ರಮಾಣ ಕಡಿಮೆಯಾದ ಸಂದರ್ಭದಿಂದಲೇ ಜಿಲ್ಲೆಯಲ್ಲಿ ಜಿನ್ನಿಂಗ್ ಮಿಲ್ಗಳು ಒಂದೊಂದಾಗಿ ಬಾಗಿಲು ಮುಚ್ಚಿವೆ.

ಕೆಲ ಜಿನ್ನಿಂಗ್ ಮಿಲ್ಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿದ್ದು, ಅವು ಸಹ ಹತ್ತಿ ಖರೀದಿಸಲು ಕಸರತ್ತು ನಡೆಸುತ್ತಿವೆ. ಜಿಲ್ಲೆಯಲ್ಲಿ ಹತ್ತಿ ಲಭ್ಯವಿಲ್ಲದಿದ್ದರಿಂದ, ಬೇರೆ ಜಿಲ್ಲೆಗಳಿಂದ ಹತ್ತಿ ತರುತ್ತಿವೆ. ಎಲ್ಲ ಜಿಲ್ಲೆಯಲ್ಲಿಯೂ ಕ್ರಮೇಣ ಹತ್ತಿ ಬೆಳೆ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಮಿಲ್ಗಳು ಬಾಗಿಲು ಮುಚ್ಚುವ ಸ್ಥಿತಿ ಬಂದರೂ ಆಶ್ವರ್ಯವಿಲ್ಲ.

ಮೆಕ್ಕೆಜೋಳ ಹೆಚ್ಚಳ: ಜಿಲ್ಲೆಯಲ್ಲಿ 2025ನೇ ಸಾಲಿನ ಮುಂಗಾರಿನಲ್ಲಿ 2,06,338 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ರೈತರು ಮೆಕ್ಕೆ ಜೋಳ ಬೆಳೆದಿದ್ದಾರೆ. ಈಗ 2,48,493 ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.

ಹತ್ತಿಯಿಂದ ವಿಮುಖವಾಗಿ ಮೆಕ್ಕೆಜೋಳ ಬೆಳೆದಿದ್ದ ಬಹುತೇಕ ರೈತರಿಗೆ, ನಿರಂತರ ಮಳೆಯೂ ಸಮಸ್ಯೆ ತಂದೊಡ್ಡಿದೆ. ಜಿಟಿ ಜಿಟಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಮೆಕ್ಕೆಜೋಳ ಬೆಳೆಯೂ ಹಾನಿಯಾಗಿದ್ದು, ಪರಿಹಾರಕ್ಕಾಗಿ ರೈತರು ಆಗ್ರಹಿಸುತ್ತಿದ್ದಾರೆ.

ಬಾಗಿಲು ಮುಚ್ಚಿದ ಮಿಲ್ಗಳು | ಮೆಕ್ಕೆಜೋಳ ಬೆಳೆ ಹೆಚ್ಚಳ

ಮೈ ಬಗ್ಗಿಸಿ ದುಡಿಯುವವರು ಕಡಿಮೆಯಾಗಿದ್ದಾರೆ. ಹೀಗಾಗಿ ಹತ್ತಿ ಬೆಳೆಯಲು ಆಗುತ್ತಿಲ್ಲ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಂದಷ್ಟು ಬರಲಿ ಎಂದು ಮೆಕ್ಕೆಜೋಳ ಬೆಳೆಯುತ್ತಿದ್ದೇವೆ
ನಿಂಗಪ್ಪ ಮರೆಪ್ಪನವರ ಬಂಕಾಪುರ ರೈತ

ಶೇಂಗಾ ಕಡಿಮೆ; ತೊಗರಿ ಹೆಚ್ಚಳ

ಮೆಕ್ಕೆಜೋಳ ಪ್ರದೇಶ ಹೆಚ್ಚಾಗಿರುವ ಸಂದರ್ಭದಲ್ಲಿಯೇ ಶೇಂಗಾ ಬೆಳೆ ಪ್ರದೇಶವೂ ಕಡಿಮೆಯಾಗಿದೆ. ತೊಗರಿ ಬೆಳೆ ಪ್ರದೇಶದಲ್ಲಿ ಹೆಚ್ಚಳ ಕಂಡುಬಂದಿದೆ. 2025ನೇ ಸಾಲಿನ ಮುಂಗಾರಿನಲ್ಲಿ 12000 ಹೆಕ್ಟೇರ್ನಲ್ಲಿ ಶೇಂಗಾ ಬೆಳೆಯುವ ಗುರಿಯಿತ್ತು. ಆದರೆ 4976 ಹೆಕ್ಟೇರ್ನಲ್ಲಿ ಮಾತ್ರ ಶೇಂಗಾ ಬೆಳೆಯಲಾಗಿದೆ. 150 ಹೆಕ್ಟೇರ್ನಲ್ಲಿ ತೊಗರಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 414 ಹೆಕ್ಟೇರ್ನಲ್ಲಿ ತೊಗರಿ ಬೆಳೆಯಲಾಗಿದೆ. ನಿಗದಿತ ಗುರಿಗಿಂತ ತೊಗರಿ ಪ್ರದೇಶ ಶೇ 276ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.