ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 200 ಮಂದಿಗೆ ಕೋವಿಡ್ ದೃಢ

ಜಿಲ್ಲೆಯಲ್ಲಿ 1442ಕ್ಕೆ ಏರಿಕೆಯಾದ ಪ್ರಕರಣಗಳು: 17 ಮಂದಿ ಗುಣಮುಖ
Last Updated 4 ಆಗಸ್ಟ್ 2020, 15:12 IST
ಅಕ್ಷರ ಗಾತ್ರ

ಹಾವೇರಿ: ಇಬ್ಬರು ಸರ್ಕಾರಿ ವೈದ್ಯರು, ಶಿಕ್ಷಕ ಹಾಗೂ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 200 ಮಂದಿಗೆ ಕೋವಿಡ್-19 ದೃಢಪಟ್ಟಿದೆ. 17 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,442 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಒಟ್ಟು 675 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 29 ಮಂದಿ ಮೃತಪಟ್ಟಿದ್ದಾರೆ. 738 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಮಂಗಳವಾರ ಪತ್ತೆಯಾದ ಪ್ರಕರಣಗಳಲ್ಲಿ ಬ್ಯಾಡಗಿ-11, ಹಾನಗಲ್-27, ಹಾವೇರಿ-55, ಹಿರೇಕೆರೂರು-51, ರಾಣೇಬೆನ್ನೂರ-24, ಸವಣೂರ-17 ಹಾಗೂ ಶಿಗ್ಗಾವಿ-15 ಮಂದಿ ಸೇರಿದಂತೆ 200 ಮಂದಿಗೆ ಸೋಂಕು ದೃಢಪಟ್ಟಿದೆ.

6 ಕೊರೊನಾ ವಾರಿಯರ್ಸ್‌ಗೆ ಸೋಂಕು:ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯ ಸರ್ಕಾರಿ ವೈದ್ಯ, ಹಾವೇರಿ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ವೈದ್ಯ, ಹಾವೇರಿಯ ಮೂವರು ಪೊಲೀಸ್‌ ಸಿಬ್ಬಂದಿ ಮತ್ತು ಹಿರೇಕೆರೂರು ಪೊಲೀಸ್‌ ಠಾಣೆಯ ಒಬ್ಬ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಕೊರೊನಾ ವಾರಿಯರ್ಸ್‌ಗೆ ಪಾಸಿಟಿವ್‌ ದೃಢಗೊಂಡಿದೆ.

ಸೋಂಕಿತರ ವಿವರ:

ಶಿಗ್ಗಾವಿ ತಾಲ್ಲೂಕು: ಬಂಕಾಪುರ, ಹಿರೇಮಲ್ಲೂರು, ಶಿಗ್ಗಾವಿ ಪಟ್ಟಣ, ಹುಲಗೂರು, ಬಂಕಾಪುರ, ಬೆಳವಗಿ ಪ್ರದೇಶ.

ಬ್ಯಾಡಗಿ ತಾಲ್ಲೂಕು: ಮಲ್ಲೂರ ಗ್ರಾಮ, ಚಿಕ್ಕಬಾಸೂರು, ಬುಡಪನಹಳ್ಳಿ, ಕಾಗಿನೆಲೆ, ಬ್ಯಾಡಗಿ ಪಟ್ಟಣ, ರೈಲ್ವೆ ನಿಲ್ದಾಣದ ಸಮೀಪದ ಬಡಾವಣೆ.

ರಾಣೆಬೆನ್ನೂರ ತಾಲ್ಲೂಕು: ರಾಣೆಬೆನ್ನೂರು ನಗರ, ಗುಡ್ಡದ ಆನ್ವೇರಿ, ತುಮ್ಮಿನಕಟ್ಟೆ, ಹಲಗೇರಿ, ಇಟಗಿ, ಬೆನಕನಹಳ್ಳಿ.

ಹಿರೇಕೆರೂರು ತಾಲ್ಲೂಕು: ಪಟ್ಟಣ, ರಟ್ಟೀಹಳ್ಳಿ, ಪೊಲೀಸ್‌ ವಸತಿ ಗೃಹ, ಮಾಸೂರು, ಹೊಸಳ್ಳಿ, ತ್ಯಾವರಗಿ, ಮೇದೂರು, ಚಿಕ್ಕಮೊರದ, ಚನ್ನಳ್ಳಿಯ ವರಹಾ ಪ್ಲಾಟ್, ಮಾವಿನಕೊಪ್ಪ, ಶಿರಗುಂಬಿ, ಚಿಕ್ಕೇರೂರ, ಕೋಡ ಸರ್ಕಾರಿ ಆಸ್ಪತ್ರೆ, ಕಣವಿಸಿದ್ಧಗೇರಿ ಗ್ರಾಮ.

ಹಾವೇರಿ ತಾಲ್ಲೂಕು:ಜಿಲ್ಲಾ ಆಸ್ಪತ್ರೆ ವಸತಿ ಗೃಹ, ಪೊಲೀಸ್ ವಸತಿ ಗೃಹ, ಕೆರೆಮತ್ತಿಹಳ್ಳಿ ಪೊಲೀಸ್ ವಸತಿಗೃಹ, ಗುತ್ತಲ, ಅರಳಹಳ್ಳಿ, ಬುದಗುಂಡಿ, ಕಂಚಾರಗಟ್ಟಿ, ಹಾವನೂರು, ಕುಳೇನೂರ ಪ್ಲಾಟ್‍, ಗೇರುಗುಡ್ಡ ಬಸಾಪುರ, ಕಲ್ಲೇದೇವರ ಗ್ರಾಮ, ಮೈಲಾರ, ಅಗಡಿ.

ಹಾನಗಲ್ ತಾಲ್ಲೂಕು: ಗಿರಿಶಿನಕೊಪ್ಪ, ಅಕ್ಕಿಆಲೂರು, ಮುಳಥಳ್ಳಿ, ನಿಟಗಿನಕೊಪ್ಪ, ಸುಲಗನಹಳ್ಳಿ, ಕಾಡಶೆಟ್ಟಿಹಳ್ಳಿ, ಗೌರಿಗುಡ್ಡ ಬಸಾಪುರ, ಸೈಯದಗುಪ್ಪಿ, ಅರಳೇಶ್ವರ, ಅಕ್ಕಿವಳ್ಳಿ, ದ್ಯಾಮನಕೊಪ್ಪ, ಆಡೂರು, ಚಿಕ್ಕೇರಿಹೊಸಳ್ಳಿ.

ಸವಣೂರ ತಾಲ್ಲೂಕು: ಪಟ್ಟಣ, ಹತ್ತಿಮತ್ತೂರು, ಮೆಳ್ಳಾಗಟ್ಟಿ, ಮಂತ್ರೋಡಿ, ಯಲವಿಗಿ, ಮಂಟಗಣಿ, ಗುಂಡೂರ, ಕುರುಬರಮಲ್ಲೂರು.

ಗುಣಮುಖರ ವಿವರ:ಸವಣೂರು ಹಾಗೂ ರಾಣೆಬೆನ್ನೂರಿನ ತಲಾ ಒಬ್ಬರು, ಹಿರೇಕೆರೂರು-7 ಹಾಗೂ ಹಾವೇರಿ ತಾಲೂಕಿನ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೈನ್‍ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೋಷಿಸಲಾಗಿದೆ. ಆಯಾ ತಾಲ್ಲೂಕು ತಹಶೀಲ್ದಾರ್‌ಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT