ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ| ಕ್ಷುಲಕ ಕಾರಣ: ಚೂರಿ ಇರಿತ–ಗಾಯ

Published 18 ಜುಲೈ 2023, 16:31 IST
Last Updated 18 ಜುಲೈ 2023, 16:31 IST
ಅಕ್ಷರ ಗಾತ್ರ

ಶಿಗ್ಗಾವಿ: ಕ್ಷುಲ್ಲಕ ಕಾರಣಕ್ಕೆ ಒಂದೇ ಗ್ರಾಮದ ಇಬ್ಬರು ವ್ಯಕ್ತಿಗಳು ಜಗಳ ಮಾಡುವಾಗ ಓರ್ವನಿಗೆ ಚೂರಿ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಸದಾಶಿವಪೇಟೆ, ಮುನವಳ್ಳಿ ಗ್ರಾಮದ ಮಾರ್ಗದಲ್ಲಿ ಮಂಗಳವಾರ ನಡೆದಿದೆ.

ಸದಾಶಿವಪೇಟೆ ಗ್ರಾಮದ ಅಟೋ ಚಾಲಕ ಪ್ರವೀಣ ಮತ್ತಿಗಟ್ಟಿ ಚೂರಿ ಇರಿತಕ್ಕೊಳಗಾದ ಯುವಕ ಎಂದು ತಿಳಿದು ಬಂದಿದೆ. ಇಬ್ಬರಿಗೂ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ತೆಗೆದುಕೊಂಡು ಹೋಗಲಾಗಿದೆ.

ಸದಾಶಿವಪೇಟೆ ಗ್ರಾಮದಿಂದ ಬಂಕಾಪುರಕ್ಕೆ ಹೋಗುವ ಮಾರ್ಗದಲ್ಲಿ ಸದಾಶಿವಪೇಟೆ ಗ್ರಾಮದ ಕುರಿಗಾಯಿ ಶಣ್ಮುಖಪ್ಪ ನರಗುಂದ ಕುರಿಮೇಯಿಸುತ್ತಿದ್ದಾಗ ಅದೇ ಗ್ರಾಮದ ಅಟೋ ಚಾಲಕ ಪ್ರವೀಣ ಮತ್ತಿಗಟ್ಟಿ ದಾರಿಗಾಗಿ ಜೋರಾಗಿ ಹಾರ್ನ್‌ (ಶಬ್ಧ) ಹಾಕಿದ್ದಾರೆ. ಈ ವಿಷಯಕ್ಕಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಈ ಮಧ್ಯೆ ಕುರಿಗಾಯಿ ಷಣ್ಮುಖಪ್ಪ ಅಟೊ ಚಾಲಕ ಪ್ರವೀಣ ಮತ್ತಿಗಟ್ಟಿಗೆ ಚೂರಿ ಇರಿದಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT