ಸೋಮವಾರ, ಜೂಲೈ 6, 2020
27 °C

ಪರಿಹಾರ ನೀಡಲು ಕಲಾವಿದರ ಮನವಿ

- Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಲಾಕ್‌ಡೌನ್‌ನಿಂದ ಕಾರ್ಯಕ್ರಮಗಳು ರದ್ದಾದ ಕಾರಣ ತೀವ್ರ ಸಂಕಷ್ಟದಲ್ಲಿರುವ ಕಲಾವಿದರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಕಲಾವಿದರು ಮನವಿ ಮಾಡಿದ್ದಾರೆ. 

ಕೊರೊನಾ ಸೋಂಕು ಹಾವಳಿಯಿಂದ ಎರಡು ತಿಂಗಳು ದೇಶದಾದ್ಯಂತ ಲಾಕ್‍ಡೌಕ್ ಜಾರಿಯಾಯಿತು. ಇದರಿಂದ ಧಾರ್ಮಿಕ ಸಭೆ, ಮದುವೆ ಹಾಗೂ ಇತರೆ ಕಾರ್ಯಕ್ರಮಗಳು ರದ್ದಾದವು. ಎಲ್ಲಾ ಕಲಾವಿದರಿಗೆ ತಲಾ ₹ 2 ಸಾವಿರ ಸಹಾಯಧನ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇಲ್ಲಿಯವರೆಗೂ ಯಾವುದೇ ಸಹಾಯಧನ ನೀಡಿರುವುದಿಲ್ಲ ಎಂದು ಕಲಾವಿದ ವೀರಭದ್ರಪ್ಪ ಎಸ್‌.ಹೊಮ್ಮರಡಿ ಬೇಸರ ವ್ಯಕ್ತಪಡಿಸಿದ್ದಾರೆ. 

ಜನವರಿಯಿಂದ ಜೂನ್‌ವರೆಗೆ ಕಲಾವಿದರಿಗೆ ಉತ್ತಮ ಸಮಯ. ಹೀಗಾಗಿ ಲಾಕ್‌ಡೌನ್‌ ತೆರವುಗೊಂಡ ನಂತರವೂ ಈ ವರ್ಷ ಯಾವುದೇ ಕಾರ್ಯಕ್ರಮಗಳು ಸಿಗುವುದಿಲ್ಲ. ಮುಂದಿನ ವರ್ಷದವರೆಗೂ ಮತ್ತೆ ಕಾಯಬೇಕು. ಇದರಿಂದ ಕಲಾವಿದರು ಮತ್ತು ಸಹ ಕಲಾವಿದರ ಕುಟುಂಬಗಳು ಜೀವನ ನಿರ್ವಹಣೆ ಮಾಡುವುದಕ್ಕೂ ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ವರ್ಗದವರಿಗೆ ಕೊಟ್ಟಂತೆ ನಮಗೂ ಪರಿಹಾರ ನೀಡಬೇಕು ಎಂದು ಕಲಾವಿದ ಗುರುಮಹಾಂತಯ್ಯ ಆರಾಧ್ಯಮಠ ಒತ್ತಾಯಿಸಿದ್ದಾರೆ. 

ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಬಡವಪ್ಪ ಆನವಟ್ಟಿ, ವೀರಯ್ಯ ವಿ.ಸಂಕಿನಮಠ ಸೇರಿದಂತೆ ಇತರೆ ಕಲಾವಿದರು ಇದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು