ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಮಸೀದಿ ನಿರ್ಮಾಣ ಮಾಡುತ್ತೇವೆ ಎಂಬ ಸ್ಟೇಟಸ್: ಸವಣೂರು ಮುಸ್ಲಿಂ ಯುವಕ ವಶಕ್ಕೆ

ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ಮುಸ್ಲಿಂ ಬಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Published 23 ಜನವರಿ 2024, 14:32 IST
Last Updated 24 ಜನವರಿ 2024, 4:24 IST
ಅಕ್ಷರ ಗಾತ್ರ

ಸವಣೂರು: ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಸಂದೇಶ ಹಂಚಿಕೊಂಡ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ಮುಸ್ಲಿಂ ಬಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ತನ್ನ ವೈಯಕ್ತಿಕ ವಾಟ್ಸ್ಆಪ್ ಸ್ಟೇಟ್ಸ್‌ನಲ್ಲಿ ಇರಿಸಿಕೊಂಡಿದ್ದ ವಿಡಿಯೋ ಸಂದೇಶದಲ್ಲಿ ರಾಮ ಮಂದಿರಕ್ಕಿಂತಲೂ ದೊಡ್ಡ ಮಸೀದಿ ನಾವು ನಿರ್ಮಾಣ ಮಾಡುತ್ತೇವೆ ಎಂಬ ವಿಡಿಯೊದಲ್ಲಿ ರಾಮನ ಮಂದಿರವನ್ನು ತೋರಿಸಲಾಗಿದೆ. ನೀವು ಇಷ್ಟು ದೊಡ್ಡ ಮಂದಿರ ಕಟ್ಟಿರಬಹುದು. ನಾವು ಅದಕ್ಕಿಂತಲೂ ದೊಡ್ಡದಾದ ಮಸೀದಿ ಕಟ್ಟುತ್ತೇವೆ ಎಂದರು.

ಏಷ್ಯಾದಲ್ಲಿಯೇ ದೊಡ್ಡ ಮಸೀದಿ ನಿರ್ಮಾಣ ಮಾಡುತ್ತೇವೆ. ಚಿತ್ರದಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜದ ಚಿತ್ರವಿಟ್ಟು, ಹಮ್ ಬಾಪ್ ಹೈ ತುಮಾರೆ, ತುಮ ಬೇಟೆ ಹೊ ಹಮಾರೆ, ಹಮ್ಸೆ ಡರಾ ಕರೋ ಎಂದು ಕೋಮು ಪ್ರಚೋದನೆಯನ್ನು ಹೆಚ್ಚಿಸುವ ಸ್ಟೇಟಸ್ ಹಾಗೂ ವಕ್ಫ್ ಮಂಡಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಸೀದಿಯ ನೀಲನಕ್ಷೆಯನ್ನು ಸಹ ಹಾಕಿದ್ದಾನೆ.

ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೋಲಿಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT