ಹಾವೇರಿ: ಕೋವಿಡ್ ತಡೆಗಟ್ಟಲು ಹಾವೇರಿ ನಗರದಲ್ಲಿ ಪ್ರತಿದಿನ ಬೆಳಿಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವಾಣಿಜ್ಯ ಚಟುವಟಿಕೆ ನಡೆಸಿ ಉಳಿದ ಅವಧಿಯಲ್ಲಿ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸರ್ವಾನುಮತದ ನಿರ್ಣಯ ಕೈಗೊಂಡರು.

ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ನಗರದ ವರ್ತಕರು ಹಾಗೂ ಲಾರಿ, ಟೆಂಪೊ, ಆಟೊ ಚಾಲಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈಗಾಗಲೇ ಸ್ವಯಂ ಬಂದ್ ಮಾಡಲು ಕೈಗೊಂಡ ವಿವರವನ್ನು ಸಭೆಯಲ್ಲಿ ಮಂಡಿಸಿದರು.

ತಹಶೀಲ್ದಾರ್ ಶಂಕರ್ ಮಾತನಾಡಿ, ವಿವಿಧ ಸಂಘದವರಿಂದ ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ಗೆ ಮುಂದಾಗಿದ್ದು ಖುಷಿ ತಂದಿದೆ. ಇದರಿಂದ ಕೋವಿಡ್ ತಡೆಯಲು ಸಹಕಾರಿಯಾಗುತ್ತದೆ. ಸ್ವಯಂ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಎಲ್ಲರೂ ಸಹಕರಿಸಿ ಪಾಲಿಸುವಂತೆ ಮನವಿ ಮಾಡಿಕೊಂಡರು.

ಎಫ್.ಕೆ.ಸಿ.ಸಿ.ಐ. ಸದಸ್ಯ ಪಿ.ಡಿ. ಶಿರೂರ ಮಾತನಾಡಿದರು.ಡಿವೈಎಸ್ಪಿ ವಿಜಯಕುಮಾರ ಸಂತೋಷ,ಸಿಪಿಐ ಚಿದಾನಂದ ಮೂರ್ತಿ,ಜಿಲ್ಲಾ ವಾಣಿಜ್ಯೋದ್ಯಮಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಿ.ವಿ ಹಿರೇಗೌಡರ, ಉಪಾಧ್ಯಕ್ಷ ರವಿ ಮೆಣಸಿನಕಾಯಿ, ಸಬ್ಇನ್ಸ್ಪೆಕ್ಟರ್ಗಳಾದ ಜಿ.ಬಿ ನಾವಿ, ಬಿ.ಎ ಬೇಟಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.