ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಎಲ್ಲರ ಸಹಕಾರದಿಂದ ಸಂಘದ ಅಭಿವೃದ್ಧಿ ಸಾಧ್ಯ’

Published : 24 ಸೆಪ್ಟೆಂಬರ್ 2024, 14:37 IST
Last Updated : 24 ಸೆಪ್ಟೆಂಬರ್ 2024, 14:37 IST
ಫಾಲೋ ಮಾಡಿ
Comments

ಕುಪ್ಪೇಲೂರು(ತುಮ್ಮಿನಕಟ್ಟಿ): ‘ಸಹಕಾರ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಸಂಘದ ಎಲ್ಲ ಸದಸ್ಯರು, ಆಡಳಿತ ಮಂಡಳಿ ಹಾಗೂ ಇಲ್ಲಿಯ ಸಿಬ್ಬಂದಿಯ ಸಹಕಾರ ಬಹಳ ಮುಖ್ಯ’ ಎಂದು ಸಂಘದ ಅಧ್ಯಕ್ಷ ಹನುಮಂತಪ್ಪ ನಾಗಪ್ಪ ಸಂಕಣ್ಣನವರ ಹೇಳಿದರು.

ಇಲ್ಲಿಯ ಡಾ. ಬಾಬೂ ಜಗಜೀವನರಾಂ ಸಮುದಾಯ ಭವನದಲ್ಲಿ ಈಚೆಗೆ ನಡೆದ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಸಂಘದ ಅಭಿವೃದ್ಧಿಯ ಹಿತದೃಷ್ಟಿಯಿಂದ ರೈತರು ಪ್ರತಿ ವರ್ಷ ಸಾಲ ಮರುಪಾವತಿ ಮಾಡಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಸಾಲ, ಸೌಲಭ್ಯ ಪಡೆದು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಚ್. ನ್ಯಾಮತಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ವಿಶ್ವನಾಥ ಜಿಗಳಿ, ಮೃತ್ಯುಂಜಯಪ್ಪ ಮರಡೂರ, ಶಿವಪ್ಪ ದೊಣ್ಣೇರ, ಭರಮಪ್ಪ ಚಪ್ಪರದವರ, ಶ್ಯಾಮರಡ್ಡಿ ನ್ಯಾಮತಿ, ಸುಶೀಲವ್ವ ಬತ್ತೇರ, ಆಂಜನೇಯ ಸುಂಕದ, ಸುಧಾ ಜಿಗಳಿ, ರತ್ನವ್ವ ಚಲವಾದಿ, ಅಶೋಕ ಮಣಕೂರ, ಸೂರ್ಯಕಾಂತ ಆಡಿನವರ, ಕೆ. ಎಚ್ ಕೊಪ್ಪದವರ, ಪಾಲಾಕ್ಷಪ್ಪ ಕಡೇಮನಿ, ಹನುಮಪ್ಪ ಬತ್ತೇರ, ಕೇಶವರೆಡ್ಡಿ ಹರಿಹರ, ಕೊಟ್ರಪ್ಪ ಚಕ್ರಸಾಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT