ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮಗೂ ಬದುಕುವ ಹಕ್ಕಿದೆ’ ನಾಟಕ ಪ್ರದರ್ಶನ

Last Updated 24 ಸೆಪ್ಟೆಂಬರ್ 2022, 14:40 IST
ಅಕ್ಷರ ಗಾತ್ರ

ಹಾವೇರಿ: ಆಟ–ಪಾಠದಲ್ಲಿ ನಲಿಯಬೇಕಾದ ಎಳೆಯ ವಯಸ್ಸಿನ ಮಕ್ಕಳು, ದುಡಿಮೆಯ ನೊಗವನ್ನು ಹೊತ್ತು ಶೋಷಣೆಗೆ ಒಳಗಾಗುವ ಸಂಕಷ್ಟವನ್ನು ‘ನಮಗೂ ಬದುಕುವ ಹಕ್ಕಿದೆ’ ನಾಟಕ ತೆರೆದಿಟ್ಟಿತು.

ನಗರದ ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕದ ಆಶ್ರಯದಲ್ಲಿ ‘ನಮಗೂ ಬದುಕುವ ಹಕ್ಕಿದೆ’ ನಾಟಕ ಪ್ರದರ್ಶನಗೊಂಡಿತು.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಬಾಲ ಕಾರ್ಮಿಕರಾಗುವ ಎಳೆಯ ಮನಸ್ಸುಗಳಿಗೆ ಶಿಕ್ಷಣ ನೀಡಿ ಸುಧಾರಿಸುವ ಅಗತ್ಯವಿದೆ’ ಎಂದರು.

ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿಗಳಾದ ಪ್ರೊ.ಕೆ.ಎಸ್. ಶಮಂತಕುಮಾರ, ಡಾ.ಶಿವಾನಂದ ಪಾಯಮಲ್ಲೆ ಇದ್ದರು.

ಗೆಳೆಯರ ಬಳಗದ ಮುಖ್ಯ ಶಿಕ್ಷಕಿ ಉಮಾ ಎ.ಹೊರಡಿ ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷಿ ಕಿತ್ತೂರಮಠ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT