ಭಾನುವಾರ, ನವೆಂಬರ್ 28, 2021
19 °C

ದಸರಾ ಸಿಮೋಲ್ಲಂಘನೆ: ಪಲ್ಲಕ್ಕಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ವಿವಿಧ ದೇವಸ್ಥಾನಗಳ ಪಲ್ಲಕ್ಕಿಗಳ ಮೆರವಣಿಗೆ ಮತ್ತು ಸಿಮೋಲ್ಲಂಘನೆ ಧಾರ್ಮಿಕ ಆಚರಣೆ ನಡೆಯಿತು. ‌ವಿವಿಧ ದೇವರುಗಳ ಪಲ್ಲಕ್ಕಿಗಳೂ ಇಲ್ಲಿನ ಪುರಾತನ ಪ್ರಸಿದ್ಧ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದವು.

ಬಳಿಕ ಭಕ್ತರ ಹರ್ಷೋದ್ಭಾರದ ನಡುವೆ ಪಟ್ಟಣ ಹೊರಭಾಗದ ಪಿಳ್ಳನಗಟ್ಟಿ ದೇವಸ್ಥಾನಕ್ಕೆ ಪಲ್ಲಕ್ಕಿಗಳು ಭೇಟಿ ನೀಡಿದ್ದವು. ಪಿಳ್ಳನಗಟ್ಟಿಯಿಂದ ಮರಳಿದ ಪಲ್ಲಕ್ಕಿಗಳು ಕೆಲಹೊತ್ತು ಕಲ್ಲಬಾವಿ ಹತ್ತಿರ ನೆಲೆಗೊಂಡಿದ್ದವು. ನಂತರ ಮೂಲ ದೇವಸ್ಥಾನಗಳಿಗೆ ಪಲ್ಲಕ್ಕಿಗಳು ಮರಳಿದವು. ಪಟ್ಟಣ ಹೊರಭಾಗದ ಮಲ್ಲಿಗಾರ ಗುಡ್ಡದಲ್ಲಿನ ಸಿದ್ದರಾಮೇಶ್ವರ ದೇವಸ್ಥಾನದ ಬನ್ನಿ ಮಂಟಪವನ್ನು ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು