ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಎಂದು ಘೋಷಣೆಯಾಗಿದ್ದು. ಪಟ್ಟಣ ಪಂಚಾಯತಿಯು 20 ಸದಸ್ಯರ ಬಲ ಹೊಂದಿದ್ದು,ಇದರಲ್ಲಿ ಬಿಜೆಪಿ 8 ಕಾಗ್ರೇಸ್ 7 ಜೆಡಿಎಸ್ 1 ಹಾಗೂ ಪಕ್ಷೇತರರು 4 ಸ್ಥಾನ ಹೊಂದಿದ್ದು ಇದರ ಜೊತೆಗೆ ಶಾಸಕರು ಮತ್ತು ಸಂಸದರ ಮತವನ್ನೂ ಹೊಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ 12 ಮತಗಳು ಅವಶ್ಯವಾಗಿವೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಶುರುವಾಗಿದೆ.