ಶನಿವಾರ, ಡಿಸೆಂಬರ್ 5, 2020
25 °C

ವಿದ್ಯುತ್‌ ಸ್ಪರ್ಶ: 150 ಕ್ವಿಂಟಲ್‌ ಮೆಕ್ಕೆಜೋಳ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಹೊಲದಲ್ಲಿ ಗುಡ್ಡೆ ಹಾಕಿದ್ದ 150 ಕ್ವಿಂಟಲ್‌ ಮೆಕ್ಕೆಜೋಳ ಫಸಲು ಶನಿವಾರ ಸುಟ್ಟು ಕರಕಲಾಗಿದೆ.

‘8 ಎಕರೆ 23 ಗುಂಟೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕಟಾವು ಮಾಡಿದ ನಂತರ ಹೊಲದಲ್ಲೇ ಒಣಗಿ ಹಾಕಿದ್ದೆವು. ಹೊಲದಲ್ಲಿ ಹಾದು ಹೋಗಿರುವ ವಿದ್ಯುತ್‌ ಕಂಬದಿಂದ ವಿದ್ಯುತ್‌ ಸ್ಪರ್ಶವಾಗಿ ಶೇ 90ರಷ್ಟು ಮೆಕ್ಕೆಜೋಳ ಸುಟ್ಟು ಕರಕಲಾಗಿದೆ. ಅಂದಾಜು ₹2 ಲಕ್ಷ ನಷ್ಟವಾಗಿದೆ’ ಎಂದು ಗ್ರಾಮದ ರುದ್ರಪ್ಪ ಓಂಕಾರಣ್ಣ ಅಳಲು ತೋಡಿಕೊಂಡರು. 

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು. ಇದರಿಂದ ಪಕ್ಕದಲ್ಲಿದ್ದ ಕಬ್ಬಿನ ಹೊಲಗಳಿಗೆ ಬೆಂಕಿ ಹರಡುವುದು ತಪ್ಪಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.