ಸೋಮವಾರ, ಜೂಲೈ 6, 2020
27 °C
‘ಆರ್‌ಟಿಇ’ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ

ಶಾಲಾ ಮುಚ್ಚುವ ಭೀತಿ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಇಲ್ಲಿನ ಬಸವೇಶ್ವರ ನಗರದ 12ನೇ ಅಡ್ಡರಸ್ತೆಯಲ್ಲಿರುವ ವಿಶ್ವಭಾರತಿ ಆಂಗ್ಲ ಮಾಧ್ಯಮ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಮುಚ್ಚುವ ಸಂಭವ ಇದೆ. ಆದ್ದರಿಂದ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು. 

ನಮ್ಮ ಮಕ್ಕಳು ಎಲ್‌.ಕೆ.ಜಿ.ಯಿಂದ 3ನೇ ತರಗತಿಯವರೆಗೆ ಸರ್ಕಾರದ ಆರ್‌ಟಿಇ ಅಡಿ ಪ್ರವೇಶ ಪಡೆದು ಶಿಕ್ಷಣ ಕಲಿಯುತ್ತಿದ್ದರು. ಆದರೆ ಆಡಳಿತ ಮಡಳಿಯವರು ಶಾಲೆ ಮುಚ್ಚುವ ತೀರ್ಮಾನ ಮಾಡಿದ್ದಾರಂತೆ. ಹಾಗಾದರೆ ನಮ್ಮ ಮಕ್ಕಳು ಉಚಿತವಾಗಿ ಲಭ್ಯವಾಗಿರುವ ಶಿಕ್ಷಣವನ್ನು ಮುಂದೆ ನಮಗೆ ಯಾರು ನೀಡುವರು? ಆಂಗ್ಲ ಮಾಧ್ಯಮ ಎಂದು ಈ ಶಾಲೆಗೆ ಸೇರಿಸಲಾಗಿತ್ತು. ದಿಢೀರನೆ ಶಾಲೆ ಮುಚ್ಚಿದರೆ ಮಕ್ಕಳ ಶಿಕ್ಷಣ ಪಡೆಯುವುದು ಹೇಗೆ? ಎಂದು ಮನವಿಯಲ್ಲಿ ಪ್ರಶ್ನಿಸಿದ್ದಾರೆ. 

ಬಡ ಕುಟುಂಬವರಾದ ನಮಗೆ ಆರ್‌ಟಿಇ ಅಡಿ ಪ್ರವೇಶ ಪಡೆದಿರುವುದು ಅನುಕೂಲವಾಗಿತ್ತು. ಅಧಿಕಾರಿಗಳು ನಮ್ಮ ಮಕ್ಕಳಿಗೆ ಪರ್ಯಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪಾಲಕರು ಒತ್ತಾಯಿಸಿದರು.

ಪಾಲಕರಾದ ಶಿವಪ್ಪ ಲಮಾಣಿ, ಪ್ರಕಾಶ ಹಲಗಲಿ, ಅನ್ವರಸಾಬ್‌ ಮಕಾಂದರ, ಮಾಲತೇಶ ಕೋಡಿಹಳ್ಳಿ, ಕಲ್ಪನಾ ಗೌಡರ, ಮಾಬುಸಾಬ ಅಜ್ಜಪ್ಪ ದೊಡತೇಬಾರ, ಬಾಬುಸಾಬ ಸೌದಗರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು