ಬುಧವಾರ, ಜನವರಿ 22, 2020
19 °C
ನಮ್ಮೂರ ಜಾತ್ರೆ: ಹುಕ್ಕೇರಿಮಠದ ಕಾಲೇಜು ಆವರಣದಲ್ಲಿ 3 ದಿನ ಪ್ರದರ್ಶನ

ಫಲಪುಷ್ಪ ಪ್ರದರ್ಶನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಮ್ಮೂರ ಜಾತ್ರೆಯ ಅಂಗವಾಗಿ ನಗರದ ಹುಕ್ಕೇರಿಮಠದ ಕಾಲೇಜು ಆವರಣದಲ್ಲಿ ಜ.3 ರಿಂದ 6ರವರಗೆ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್‌. ಪ್ರದೀಪ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 10 ದಿನಗಳಿಂದ ಫಲ-ಪುಷ್ಪ ಪ್ರದರ್ಶನದ ತಯಾರಿ ನಡೆಸಿದ್ದು, ಇಂದಿನಿಂದ 3 ದಿನ ಪ್ರದರ್ಶನ ನಡೆಯಲಿದೆ ಎಂದರು.

ಈ ಪ್ರದರ್ಶನದಲ್ಲಿ 17 ಸಾವಿರ ಕೆಂಪು ಗುಲಾಬಿ ಹೂವುಗಳಿಂದ ನಂದಿ, 12 ಸಾವಿರ ಬಿಳಿ ಹೂವುಗಳಿಂದ ಆನೆ, ವಿವಿಧ ಪುಷ್ಪಗಳಿಂದ ಗಂಡಭೇರುಂಡ, ಬಾತುಕೋಳಿ, ನವಿಲು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಇನ್ನೂ ಸಿರಿ ಧಾನ್ಯಗಳಿಂದ ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಸ್ವಾಮೀಜಿ, ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾಮೀಜಿ ಹಾಗೂ ಶಿವಲಿಂಗ ಸ್ವಾಮೀಜಿ ಭಾವಚಿತ್ರ, ಜಗದ್ಗುರು ಬಸವಣ್ಣ, ಭುವನೇಶ್ವರಿ ದೇವಿ, ವೀರಯೋಧ ಸ್ಮಾರಕ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಸಿರಿ ಧಾನ್ಯಗಳಲ್ಲಿ, ರಂಗೋಲಿಯಲ್ಲಿ ಬಿಡಿಸಲಾಗುತ್ತಿದೆ ಎಂದರು.

ಕಲ್ಲಂಗಡಿ ಹಣ್ಣು ಹಾಗೂ ವಿವಿಧ ತರಕಾರಿಗಳಲ್ಲಿ ಗಣ್ಯ ವ್ಯಕ್ತಿಗಳ ಮೂರ್ತಿಗಳ ಕೆತ್ತನೆಯನ್ನು ಮಾಡಲಾಗಿದ್ದು, ಅವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಜಿಲ್ಲೆಯ 7 ತಾಲ್ಲೂಕುಗಳಲ್ಲಿ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ಕೆಂಪು ಗುಲಾಬಿ, ಸೇವಂತಿಗೆ, ಬಿಳಿ ಪೂವು, ಹಳದಿ ಹೂವು, ಬೊನ್ಸಾಯ್‌(ಕುಬ್ಜ ಗಿಡ)ಗಳು ಸೇರಿದಂತೆ ಇತರೆ ಹೂವುಗಳು ಸೇರಿ ₹1.80 ಲಕ್ಷ ವೆಚ್ಚದ ಹೂವುಗಳ ಅಲಂಕರಿಸಿ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಫಲ-ಪುಷ್ಪ ಪ್ರದರ್ಶನವು ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮನರಂಜನೆಯ ಜತೆಗೆ ಸಣ್ಣ ಮತ್ತು ದೊಡ್ಡ ರೈತರಿಗೆ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಜನವರಿ 3 ರಂದು ದನಗಳ ಜಾತ್ರೆ, ದನಗಳಿಗೆ ಉಚಿತ ಪಶು ಚಿಕಿತ್ಸಾ ಶಿಬಿರ, ಜಾನುವಾರ ಪ್ರದರ್ಶನ ನಡೆಯಲಿದೆ ಜಾನುವಾರು ಪ್ರದರ್ಶನದಲ್ಲಿ ಉತ್ತಮ ತಳಿಗೆ ಸೂಕ್ತ ಬಹುಮಾನ ಘೋಷಿಸಲಾಗುವುದು ಎಂದರು.

ಫಲಪುಷ್ಪ ಪ್ರದರ್ಶನದ ತಯಾರಿಯನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವೀಕ್ಷಿಸಿದರು. ಜಾತ್ರಾ ಸಮಿತಿಯ ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಎಸ್.ಎಸ್. ಮುಷ್ಠಿ. ಬಿ. ಬಸವರಾಜ, ತೋಟಗಾರಿಕೆ ಇಲಾಖೆ ನಿರ್ದೇಶಕ ಅಶೋಕ ಕುರುಬರ, ಹಿರಿಯ ಸಹಾಯಕ ನಿರ್ದೇಶಕ ಬಸವರಾಜ ಬರೇಗಾರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು