ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸವಣೂರು: ಸರ್ಕಾರಿ ಜಾಗ ಸಾರ್ವಜನಿಕರಿಗೆ ನೀಡದಂತೆ ಒತ್ತಾಯ

Published 2 ಜುಲೈ 2024, 16:16 IST
Last Updated 2 ಜುಲೈ 2024, 16:16 IST
ಅಕ್ಷರ ಗಾತ್ರ

ಸವಣೂರು: ಜೇಕಿನಕಟ್ಟಿ ಗ್ರಾಮದ ಸರ್ಕಾರಿ ಜಾಗವನ್ನು ಸರ್ಕಾರಿ ಯೋಜನೆಯಡಿ ಸಾರ್ವಜನಿಕರಿಗೆ ನೀಡದಂತೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ಗ್ರೇಡ್-2 ತಹಶೀಲ್ದಾರ್ ಗಣೇಶ ಸವಣೂರ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಇರುವ ಸರ್ಕಾರಿ ಜಾಗವನ್ನು ಗ್ರಾಮಸ್ಥರು ಹಾಗೂ ಶ್ರೀ ಹುತ್ತಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬಂದಿದೆ. ಆದರೆ ಈಗ ಭೂ ಮಂಜೂರಾತಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ ಸಾರ್ವಜನಿಕ ವ್ಯಕ್ತಿಗಳ ಜತೆಗೆ ಪತ್ರ ವ್ಯವಹಾರ ನಡೆದ ಮಾಹಿತಿ ಲಭ್ಯವಾಗಿದೆ.  ಗ್ರಾಮಸ್ಥರು ಹಾಗೂ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗಮನಕ್ಕೆ ತರದೆ ಮಂಜೂರಾತಿ ನೀಡಿ ಆದೇಶ ಮಾಡಿದರೆ ಗ್ರಾಮಸ್ಥರು ಜಾನುವಾರುಗಳೊಂದಿಗೆ ಕಂದಾಯ ಇಲಾಖೆ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಚನ್ನಬಸಯ್ಯ ಪ್ರಭಯ್ಯನರಮಠ, ಸುರೇಶ ಅಯ್ಯನಗೌಡ್ರ, ಮಲ್ಲಯ್ಯ ಚರಂತಿಮಠ, ಮಲ್ಲೇಶಪ್ಪ ದೇವಸೂರ, ಕುಬೇರಪ್ಪ ಕುಂದಗೋಳ, ದ್ಯಾಮಣ್ಣ ದೇವಸೂರ, ಗದಿಗೆಪ್ಪಗೌಡ ಅಯ್ಯನಗೌಡ್ರ, ಶಿವಲಿಂಗಪ್ಪ ಕುಂದಗೋಳ, ಶಿವಬಸವಸ್ವಾಮಿ ಪ್ರಭಯ್ಯನವರಮಠ, ಶಿವಪುತ್ರಪ್ಪ ಕುಂದಗೋಳ, ಶಿವಯ್ಯ ಪ್ರಭಯ್ಯನವರಮಠ, ಮಾಹಾರುದ್ರಪ್ಪ ಬೆಳವಡಿ, ಈಶ್ವರಪ್ಪ ಬಡಿಗೇರ ಸೇರಿದಂತೆ ಜೇಕಿನಕಟ್ಟಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT