ಅಕ್ಕಿಆಲೂರು: ಇಲ್ಲಿ ವಿವಿಧೆಡೆ ಪ್ರತಿಷ್ಟಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಗುರುವಾರ ರಾತ್ರಿ ನಡೆಯಿತು. ವೈಭವದ ಮೆರವಣಿಗೆ, ಕಲಾಪ್ರದರ್ಶನದೊಂದಿಗೆ ಗಣಪನಿಗೆ ಭಕ್ತಿಪೂರ್ವಕ ವಿದಾಯ ಹೇಳಲಾಯಿತು.
ಟ್ರ್ಯಾಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಮಾರ್ಗದುದ್ದಕ್ಕೂ ಭಕ್ತರು ಆರತಿ ಬೆಳಗಿ, ಪ್ರಾರ್ಥನೆ ಸಲ್ಲಿಸಿದರು. ಜಯಘೋಷ, ಪಟಾಕಿ ಅಬ್ಬರ, ಯುವಕರ ನೃತ್ಯ, ಡೊಳ್ಳು, ಝಾಂಜ್ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ತಂದವು.
ಸಿ.ಎಂ. ಉದಾಸಿ ಮುಖ್ಯ ರಸ್ತೆ, ವಿರಕ್ತಮಠ ರಸ್ತೆ, ಬಸ್ ನಿಲ್ದಾಣ, ಹಳೂರು ಓಣಿ, ಕುಮಾರ ನಗರ, ದುಂಡಿಬಸವೇಶ್ವರ ಓಣಿ, ಮಾರುತಿ ನಗರ, ಚಲವಾದಿ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೂರ್ತಿಗಳ ಮೆರವಣಿಗೆ ಸಾಗಿತು.