ಬ್ಯಾಡಗಿ: ‘ವಿದ್ಯಾರ್ಥಿಗಳ ತಪ್ಪೊಪ್ಪುಗಳನ್ನು ತಿದ್ದಿ ಹೇಳಿ ಉತ್ತಮ ವ್ಯಕ್ತಿತ್ವ ರೂಪಿಸಿ, ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಮಾಡುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ’ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಹೇಳಿದರು.

ಪಟ್ಟಣದ ಎಸ್ಎಸ್ಪಿಎನ್ ಪ್ರೌಢ ಶಾಲೆಯಲ್ಲಿ 1998–99ರಲ್ಲಿ ಎಸ್ಎಸ್ಎಲ್ಸಿ ಓದಿದ ವಿದ್ಯಾರ್ಥಿಗಳು ಭಾನುವಾರ ಏರ್ಪಡಿಸಿದ್ದ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕಿನ ದೀವಿಗೆ ಹಚ್ಚುವವರು ಗುರುಗಳು. ತಂದೆ ಮತ್ತು ತಾಯಿ ಇಬ್ಬರನ್ನೂ ಶಿಕ್ಷಕರೊಬ್ಬರಲ್ಲಿ ಕಾಣಲು ಸಾಧ್ಯವಿದೆ. ಗುರುಗಳಿಗೆ ಪರಮ ಪವಿತ್ರ ಸ್ಥಾನಗಳಿದ್ದು, ತಂದೆ, ತಾಯಿ ಮತ್ತು ಗುರುಗಳು ಪ್ರತಿಯೊಬ್ಬರ ಬದುಕನ್ನು ರೂಪಿಸುವ ಪ್ರಮುಖ ಶಕ್ತಿಗಳಾಗಿವೆ’ ಎಂದರು.

ನಿವೃತ್ತ ಉಪಪ್ರಾಚಾರ್ಯ ಎಂ.ಕೆ.ಹೊಸಮನಿ ಮಾತನಾಡಿ, ‘ಮಗುವಿನ ಬೆಳವಣಿಗೆಯು ವಿವಿಧ ಹಂತಗಳಲ್ಲಿ ಜೀವನದ ಅರ್ಥ, ಗುರಿ, ಜೀವನದ ಮೌಲ್ಯಗಳನ್ನು ತಿಳಿಸಲು ಗುರುವಿನ ಮಾರ್ಗದರ್ಶನವೇ ಅಡಿಪಾಯ’ ಎಂದರು.

ಈ ಸಂದರ್ಭದಲ್ಲಿ ಅಗಲಿದ ಗುರುಗಳಿಗೆ ಹಾಗೂ ಸ್ನೇಹಿತರಿಗೆ ಮೌನ ಪ್ರಾರ್ಥನೆ ಮತ್ತು ಪುಷ್ಪಾರ್ಚನೆಯ ಮೂಲಕ ಸಾಮೂಹಿಕವಾಗಿ ಗೌರವ ಸಮರ್ಪಿಸಲಾಯಿತು.

ನಿವೃತ್ತ ಪ್ರಾಚಾರ್ಯ ಎಸ್.ಬಿ.ತವರದ, ಎಂ.ಕೆ.ಹೊಸಮನಿ, ಎಂ.ವಿ.ನೆಲವಿಗಿ, ಬಿ.ಎಫ್.ದೊಡ್ಮನಿ, ಎಸ್.ಎನ್.ಪೋಲೇಶಿ, ಎ.ಕೆ.ಕುಲಕರ್ಣಿ, ಎಸ್.ಎಸ್.ಮಹಾರಾಜಪೇಟ, ಜಿ.ಎಚ್.ಹುಲ್ಲತ್ತಿ, ಸುಮಂಗಲಾ ಎಚ್.ಜಿ, ಆರ್.ಬಿ.ಮಠದ, ಎಸ್.ಡಿ.ಚನ್ನಗೌಡ್ರ, ಎಸ್.ಎಫ್.ಸಂಕಣ್ಣನವರ, ಎಸ್.ಎಸ್.ಕೊಪ್ಪದ, ಬಿ.ಎಂ.ತುಮರಿಕೊಪ್ಪದವರ, ಎಸ್.ಎಂ.ಐರಣಿ, ಎಚ್.ಬಿ.ಭಜಂತ್ರಿ, ನಾಗರಾಜ ಕುಳೇನೂರ, ಬಿ.ಎಸ್.ಆಣೂರಶೆಟ್ರ, ಎಸ್.ಎಂ.ಅಂಗಡಿ, ಮೃತ್ಯುಂಜಯ ತುರಕಾಣಿ, ಉಪಪ್ರಾಚಾರ್ಯ ಸುಭಾಷ ಎಲಿ ಅವರನ್ನು ಸನ್ಮಾನಿಸಲಾಯಿತು. ವಕೀಲ ನಿಂಗಪ್ಪ ಬಟ್ಟಲಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.