ಸೋಮವಾರ, ಸೆಪ್ಟೆಂಬರ್ 26, 2022
20 °C

ಮನೆ– ಮನೆಗೂ ಗಿಡ ಮರ ಅಭಿಯಾನ ಘೋಷಿಸಿ: ಪ್ರಧಾನಿಗೆ ಪತ್ರ ಬರೆದ ಹಾವೇರಿ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಮನೆ–ಮನೆಗೂ ಗಿಡ ಮರ’ ಅಭಿಯಾನವನ್ನು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದ ನಾಲ್ಕು ವರ್ಷದ ಬಾಲಕಿ ಸಾಧ್ಯಾ ಸಿಂಗ್‌ ರಜಪೂತ್‌ ಪತ್ರ ಬರೆದಿದ್ದಾಳೆ. 

ಪ್ರೀತಿಯ ಮೋದಿಜಿ ಅವರೇ ನೀವು ಘೋಷಿಸಿದ ‘ಹರ್‌ ಘರ್‌ ತಿರಂಗ’ ಅಭಿಯಾನವು ದೇಶದಾದ್ಯಂತ ಜಾರಿಯಾಗಿದೆ. ಅದೇ ರೀತಿ ನೀವು ‘ಹರ್‌ ಘರ್‌ ಪೇಡ್‌ ಪೌದ’ ಅಭಿಯಾನವನ್ನು ಘೋಷಣೆ ಮಾಡಬೇಕು. ಪ್ರತಿ ಮನೆಯಲ್ಲೂ ಸಸಿಗಳನ್ನು ಬೆಳೆಸಿದರೆ ಎಲ್ಲರಿಗೂ ಉತ್ತಮ ಆಮ್ಲಜನಕ ದೊರೆತು, ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ. 

ಹಾವೇರಿಯ ಅಂಚೆ ಇಲಾಖೆ ಮೂಲಕ ಸ್ವ–ಹಸ್ತಾಕ್ಷರದಲ್ಲಿ ಬರೆದ ಪತ್ರವನ್ನು ಕಳುಹಿಸಿರುವ ಸಾಧ್ಯಾಸಿಂಗ್‌ ಪ್ರಸ್ತುತ ನಗರದ ಸೇಂಟ್‌ ಆ್ಯನ್ಸ್‌ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾಳೆ. ತಂದೆ ಜೀವನಸಿಂಗ್‌ ಅವರು ‘ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ’ದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು