ಮಂಗಳವಾರ, ಜನವರಿ 21, 2020
28 °C
ಫಲಪುಷ್ಪ ಪ್ರದರ್ಶನ, ಜಾನುವಾರು ಜಾತ್ರೆ, ಕೃಷಿ ಮಾಹಿತಿ ಕಾರ್ಯಕ್ರಮ

ಹುಕ್ಕೇರಿಮಠ: ‘ನಮ್ಮೂರ ಜಾತ್ರೆ’ ಜ.1 ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಲಿಂ. ಶಿವಬಸವ ಸ್ವಾಮೀಜಿ 74ನೇ ಹಾಗೂ ಲಿಂ.ಶಿವಲಿಂಗ ಸ್ವಾಮೀಜಿಯ 11ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 2020ರ ಜನವರಿ 1ರಿಂದ 7ರವರೆಗೆ ‘ನಮ್ಮೂರ ಜಾತ್ರೆ’ ಕಾರ್ಯಕ್ರಮ ನಡೆಯಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತ್ರೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಿಂದಿನ ವರ್ಷ ಕಬಡ್ಡಿ, ವಚನ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ಫಲಪುಷ್ಪ ಪ್ರದರ್ಶನ, ಜಾನುವಾರು ಜಾತ್ರೆ, ರೈತರಿಗಾಗಿ ಕೃಷಿ ಮಾಹಿತಿನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜ.1ರಂದು ಬೆಳಿಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ, ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜ.2 ರಂದು ಸಂಜೆ ಧಾರ್ಮಿಕ ಕಾರ್ಯಕ್ರಮ, ಅಕ್ಕನ ಬಳಗದ ಸ್ಮರಣ ಸಂಚಿಕೆ ‘ಕರ್ಪೂರ ಗಿರಿ’ ಬಿಡುಗಡೆ ಮಾಡಲಾಗುತ್ತದೆ ಎಂದರು.

ಜ.3ರಂದು ಬೆಳಗ್ಗೆ 10 ಗಂಟೆಗೆ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಶಿವಬಸವ ದನಗಳ ಜಾತ್ರೆ ಉದ್ಘಾಟನೆ, ಸಂಜೆ 5.30ಕ್ಕೆ ಹಳೆ ಯಾಲಕ್ಕಿ ವರ್ತಕರ ಸಂಘದ ಆವರಣದಲ್ಲಿ ಫಲ–ಪುಷ್ಪ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಜ.4 ಮತ್ತು 5ರಂದು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಜ.6ರಂದು ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬೆ.8ಕ್ಕೆ ಸ್ವಾಮೀಜಿಗಳ ಗದ್ದುಗೆ ಮಹಾ ಪೂಜೆ, ಬಿಲ್ವಾರ್ಚನೆ, ಮಧ್ಯಾಹ್ನ 12ಗಂಟೆಗೆ ಮಹಾಗಣಾರಾಧನೆ ಸಂಜೆ 4ಕ್ಕೆ ಭಾವಚಿತ್ರದ ಮೆರವಣಿಗೆ ಇರಲಿದ್ದು, ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಜ.7ರಂದು ‘ಸಾಂಸ್ಕೃತಿಕ ಸುಗ್ಗಿ’ ಕಾರ್ಯಕ್ರಮ ನಡೆಯಲಿದೆ ಎಂದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಜಿಲ್ಲಾ ಯೋಗ ಸಂಸ್ಥೆ ಸಹಯೋಗದಲ್ಲಿ 2019ರ ಡಿ.29ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಎಲ್ಲ ವಯೋಮಾನದವರಿಗಾಗಿ ‘ಯೋಗಾಸನ ಸ್ಪರ್ಧೆ’ ಹಮ್ಮಿಕೊಳ್ಳಲಾಗಿದೆ ಎಂದರು.  

ಜಾನುವಾರುಗಳಿಗೆ ಪ್ರಶಸ್ತಿ:

ದನಗಳ ಜಾತ್ರೆ ಜತೆಗೆ ಜಾನುವಾರುಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಪ್ರದರ್ಶನ ನಡೆಯಲಿದೆ. ಇದರಲ್ಲಿ 8 ತಳಿ ಜಾನುವಾರು ಪಾಲ್ಗೊಳ್ಳಲಿದ್ದು, ಅವುಗಳಲ್ಲಿ 24 ಜಾನುವಾರುಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಹೇಳಿದರು.

ಉತ್ಸವ ಸಮಿತಿಯ ಸದಸ್ಯ ತಮ್ಮಣ್ಣ ಮುದ್ದಿ, ಮುಖಂಡರಾದ ಪಿ.ಡಿ. ಶಿರೂರ, ಎಸ್.ಎಸ್. ಮುಷ್ಠಿ, ನಾರಾಯಣ ಲೋಖಂಡೆ, ಶಿವಬಸಪ್ಪ ಜಾಬೀನ, ಪ್ರಕಾಶ ಶೆಟ್ಟಿ, ಆರ್.ಎಸ್. ಲಂಬಿ, ಶಿವಕುಮಾರ, ಶಿವರಾಜ ವಳಸಂಗದ, ಬಿ. ಬಸವರಾಜ, ಆರ್.ಎಸ್. ಮಾಗನೂರ ಇದ್ದರು.

ಪ್ರತಿಕ್ರಿಯಿಸಿ (+)