ರಟ್ಟೀಹಳ್ಳಿ: ತಾಲ್ಲೂಕಿನಲ್ಲಿ ಮಂಗಳವಾರವೂ ಮಳೆ ಮುಂದುವರೆದಿದ್ದು, ವಿವಿಧ ಗ್ರಾಮಗಳಲ್ಲಿ 16 ಮನೆಗಳು ಭಾಗಶಃ ಹಾನಿಯಾಗಿವೆ.
ಕುಡುಪಲಿ ಗ್ರಾಮದಲ್ಲಿ 4, ಹೊಸಳ್ಳಿ– 2, ಮಾಸೂರು, ಮಕರಿ, ಕೊಡಮಗ್ಗಿ, ಗಂಗಾಯಿಕೊಪ್ಪ, ನೇಶ್ವಿ, ಹುಲ್ಲತ್ತಿ, ಚಿಕ್ಕಮೊರಬ, ಶಿರಗಂಬಿ, ಗುಂಡಗಟ್ಟಿ, ಹಿರೇಮೊರಬ, ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪಂಚಾಯ್ತಿ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ: ಮನೆ ಕುಸಿದು ಮಗು ಸಾವು
ಗುತ್ತಲ: ನಿರಂತರವಾಗಿ ಸುರಿಯುತ್ತಿರುವುದರಿಂದ ಹಾವೇರಿ ತಾಲ್ಲೂಕಿನ ಮಾಳಾಪುರ ಗ್ರಾಮದಲ್ಲಿ ಮನೆ ಕುಸಿದು ಮಗು ಮೃತಪಟ್ಟಿದೆ.
ಭಾಗ್ಯ ಮಲ್ಲಪ್ಪ ಚಳ್ಳಮರದ (3) ಮೃತಪಟ್ಟ ಮಗು.
ಭಾನುವಾರ ಮನೆ ಕುಸಿದು ಗಂಭೀರ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಮಂಗಳವಾರ ಸಾವನ್ನಪ್ಪಿದೆ.
ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.