ಶುಕ್ರವಾರ, ಸೆಪ್ಟೆಂಬರ್ 25, 2020
26 °C

ಧಾರಾಕಾರ ಮಳೆ: 35 ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ತುಂತುರು ಮಳೆಯಾಗುತ್ತಿದ್ದು, ಒಟ್ಟು 35 ಮನೆಗಳಿಗೆ ಹಾನಿಯಾಗಿದೆ.

ಶಿಗ್ಗಾವಿ ತಾಲ್ಲೂಕಿನಲ್ಲಿ 12, ಸವಣೂರು ತಾಲ್ಲೂಕಿನಲ್ಲಿ 16, ಹಾನಗಲ್‌ ತಾಲ್ಲೂಕಿನಲ್ಲಿ 6, ಹಿರೇಕೆರೂರಿನಲ್ಲಿ 1 ಸೇರಿದಂತೆ ಒಟ್ಟು 35 ಮನೆಗಳು ಶಿಥಿಲಗೊಂಡಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಕಬ್ಬು ಬೆಳೆ ಹಾನಿ: ನೆಗಳೂರ ಗ್ರಾಮದ ರೈತ ನಾಗರಾಜ ಕರಬಸಪ್ಪ ಸನಾದಿ ಅವರ ಆರು ಎಕರೆ ಹೊಲದಲ್ಲಿ ಹುಲುಸಾಗಿ ಬೆಳೆದಿದ್ದ ಕಬ್ಬು ಗಾಳಿ ಹಾಗೂ ಭಾರಿ ಮಳೆಯಿಂದ ಧರೆಗುರುಳಿದೆ.

ಮಳೆ ವಿವರ: ಹಾವೇರಿ–25 ಮಿ.ಮೀ, ರಾಣೆಬೆನ್ನೂರು–19.4 ಮಿ.ಮೀ., ಬ್ಯಾಡಗಿ–20.4 ಮಿ.ಮೀ, ಹಿರೇಕೆರೂರ–41.6 ಮಿ.ಮೀ, ಸವಣೂರ–32.7 ಮಿ.ಮೀ, ಶಿಗ್ಗಾವಿ–43.2 ಮಿ.ಮೀ ಹಾಗೂ ಹಾನಗಲ್‌ 33 ಮಿ.ಮೀಟರ್‌ ಮಳೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.