ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಹಾವೇರಿ ಜಿಲ್ಲೆಯಲ್ಲಿ 87 ಮನೆಗಳಿಗೆ ಹಾನಿ 

Last Updated 20 ಮೇ 2022, 13:21 IST
ಅಕ್ಷರ ಗಾತ್ರ

ಹಾವೇರಿ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜಿಲ್ಲೆಯಾದ್ಯಂತ ಶುಕ್ರವಾರ 87 ಮನೆಗಳಿಗೆ ಹಾನಿಯಾಗಿದೆ. 370 ಹೆಕ್ಟೇರ್‌ ಕೃಷಿ ಬೆಳೆ ಮತ್ತು 77 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಷ್ಟವಾಗಿದೆ.

ಹಾವೇರಿ–5, ರಾಣೆಬೆನ್ನೂರು–7, ಬ್ಯಾಡಗಿ–21, ಹಿರೇಕೆರೂರು–11, ರಟ್ಟೀಹಳ್ಳಿ–26, ಸವಣೂರು–3, ಶಿಗ್ಗಾವಿ–8 ಹಾಗೂ ಹಾನಗಲ್‌ ತಾಲ್ಲೂಕಿನಲ್ಲಿ 6 ಮನೆಗಳು ಭಾಗಶಃ ಶಿಥಿಲವಾಗಿವೆ. ಮನೆಯ ಚಾವಣಿ, ಗೋಡೆ ಕುಸಿದ ಪರಿಣಾಮ ಜನರು ಆತಂಕದಲ್ಲೇ ವಾಸ ಮಾಡುವಂತಾಗಿದೆ.

ಸವಣೂರು ತಾಲ್ಲೂಕಿನ ಯಲವಿಗಿ ಗ್ರಾಮದ ರೈಲ್ವೆ ಕೆಳಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ಕೆಲಕಾಲ ನೀರಿನಲ್ಲಿ ಸಿಲುಕಿ ಸಂಚಾರ ಸ್ಥಗಿತಗೊಂಡಿತ್ತು. ತಡಸ ಸುತ್ತಮುತ್ತ ಶೇಂಗಾ ಬೆಳೆ ಮತ್ತು ರಾಣೆಬೆನ್ನೂರು ತಾಲ್ಲೂಕಿನಲ್ಲಿ 352 ಹೆಕ್ಟೇರ್‌ ಭತ್ತದ ಬೆಳೆ ಹಾನಿಯಾಗಿದೆ.

ರಾಣೆಬೆನ್ನೂರು ಪಟ್ಟಣ ವ್ಯಾಪ್ತಿಯ ದೊಡ್ಡಕೆರೆ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ರಾತ್ರಿ ವೇಳೆ ಪರದಾಡಿದರು. ದೇವರಗುಡ್ಡ ರೈಲ್ವೆ ಕೆಳಸೇತುವೆ ಜಲಾವೃತವಾಗಿದ್ದು, ಸಂಚಾರ ಬಂದ್‌ ಆಗಿದೆ.

ಕಳೆದ 7 ದಿನಗಳಲ್ಲಿ (ಮೇ 14ರಿಂದ ಮೇ20ರವರೆಗೆ) 126 ಮಿಲಿ ಮೀಟರ್‌ ಮಳೆಯಾಗಿದೆ. ಮೇ ತಿಂಗಳಲ್ಲಿ 40 ಮಿಲಿ ಮೀಟರ್‌ ವಾಡಿಕೆ ಮಳೆಗೆ, 186 ಮಿ.ಮೀ. ಮಳೆಯಾಗಿದೆ. ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮಾರುಕಟ್ಟೆ ಮತ್ತು ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರವೂ ವಿರಳವಾಗಿದೆ.

ಮಳೆ ವಿವರ (ಮಿ.ಮೀ.ಗಳಲ್ಲಿ)
ಬ್ಯಾಡಗಿ–49.6
ಹಾನಗಲ್‌–36.2
ಹಾವೇರಿ–72.9
ಹಿರೇಕೆರೂರು– 38.7
ರಾಣೆಬೆನ್ನೂರು–54.6
ಸವಣೂರು–64.3
ಶಿಗ್ಗಾವಿ–47.8
ರಟ್ಟೀಹಳ್ಳಿ–53.1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT