ಶಿಗ್ಗಾವಿ: ತಾಲ್ಲೂಕಿನಾದ್ಯಂತ ಕಳೆದ ಎರಡು ತಿಂಗಳಿಂದ ಸತತವಾಗಿ ಮಳೆಯಾಗುತ್ತಿರುವ ಕಾರಣ ಭೂಮಿ ತೇವಾಂಶಗೊಂಡು ಹುಲಸಾಗಿ ಬೆಳೆದ ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಹಾನಿಯಾಗುತ್ತಿದ್ದ, ಹಿನ್ನೆಲೆಯಲ್ಲಿ ಕೆಲವು ರೈತರು ಸ್ವಪ್ರೇರಣೆಯಿಂದ ಬೆಳೆ ನಾಶ ಮಾಡುತ್ತಿದ್ದಾರೆ. ಆದ್ದರಿಂದ ರೈತ ಸಮೂಹದಲ್ಲಿ ಆತಂಕದ ಛಾಯೆ ಮನೆ ಮಾಡಿದೆ.

ಪಟ್ಟಣದ ಹತ್ತಿರದ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಗೋವಿನಜೋಳ ಬೆಳೆ ಮಳೆ ನೀರಿನ ತೇವಾಂಶದಿಂದ ಹಾನಿಯಾದ ಹಿನ್ನೆಲೆಯಲ್ಲಿ ಶಿಗ್ಗಾವಿ ರೈತ ವಿರುಪಾಕ್ಷಪ್ಪ ಸಾವಳಗಿ ಕಳೆ ನಾಶಕ ಔಷಧಿ ಸಿಂಪರಿಸಿ ಸಂಪೂರ್ಣ ಬೆಳೆಯನ್ನು ನಾಶ ಪಡಿಸಿದ್ದಾರೆ. ಬೀಜ, ಬಿತ್ತನೆ ಬಾಡಿಗೆಗೆ, ಗೊಬ್ಬರ, ಎಡೆಗುಂಟೆ ಹೊಡೆಯಲು, ಕಸ ತೆಗೆಯಲು ಆಳುಕಾಳುಗಳಿಗೆ ಸೇರಿದಂತೆ ಸುಮಾರು ಒಂದು ಲಕ್ಷ ರೂಪಾಗಿಂತ ಹೆಚ್ಚಿನ ವೆಚ್ಚ ಮಾಡಲಾಗಿದೆ. ತೀವ್ರ ಮಳೆ ನೀರಿನಿಂದ ಈಗಾಗಲೆ ಬೆಳೆದ ಸಂಪೂರ್ಣ ಬೆಳೆ ನಾಶವಾಗಿದೆ.

ಹೀಗಾಗಿ ಬಿತ್ತನೆ ಬೀಜಕ್ಕಾಗಿ ಮಾಡಿರುವ ವೆಚ್ಚ ಮರಳಿ ಬರುವುದಿಲ್ಲ ಎಂಬುದನ್ನು ಅರಿತು ಕಳೆ ನಾಶಕ ಔಷಧಿ ಸಿಂಪರಿಸಿ ನಾನೇ ಬೆಳೆ ನಾಶ ಪಡಿಸಿದ್ದೇನೆ. ಸಾಲಸೂಲ ಮಾಡಿ ಬಿತ್ತನೆ ಬೀಜ, ಖರ್ಚುವೆಚ್ಚ ಮಾಡಿದ್ದೇನೆ. ಪ್ರಸಕ್ತ ವರ್ಷದ ಆರಂಭದಲ್ಲಿನ ಉತ್ತಮ ಬೆಳೆ ಬರಬಹುದುದೆಂಬ ನಿರೀಕ್ಷೆ ಕನಸು ನನಸಾಗಲಿಲ್ಲ. ಹೀಗಾದರೆ ಕುಟುಂಬದ ಬಂಡಿ ಸಾಗಿಸುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ರೈತ ವಿರುಪಾಕ್ಷಪ್ಪ ಆತಂಕ ತೋಡಿಕೊಂಡರು.

ಮೇ ಕೊನೆ ವಾರದಲ್ಲಿ ಬಿತ್ತನೆ ಆರಂಭಿಸಿದ ರೈತರು ಉತ್ತಮ ಮಳೆಯಾಗುತ್ತಿದೆ ಈ ಬಾರಿ ಉತ್ತಮ ಬೆಳೆ ಬರುತ್ತಿದೆ ಎಂದು ಸಂತಷ ಪಟ್ಟಿದ್ದರು. ಆದರೆ ಬಿತ್ತನೆ ನಂತರ ಡಿಎಪಿ ಗೊಬ್ಬರದ ಕೊರತೆ, ಅದಕ್ಕಾಗಿ ರೈತರ ಹೋರಾಟ ಮಾಡಿದ್ದಾರೆ. ಅಲ್ಲದೆ ತೀವ್ರಗೊಂಡ ಮಳೆಯಿಂದ ಜಮೀನು ಜಲಾವೃತ್ತಗೊಂಡು ಬೆಳೆಗಳು ನಾಶವಾಗುತ್ತಿದೆ.

ತಾಲ್ಲೂಕಿನ ಹುಲಸೋಗಿ, ಬೆಂಡಿಗೇರಿ, ಕಡಳ್ಳಿ, ಚಿಕ್ಕಬೆಂಡಿಗೇರಿ, ಪಾಣಿಗಟ್ಟಿ, ಹುಲಗೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ನೀರಿನಿಂದ ಸುಮಾರು 40 ರಿಂದ 50 ಸಾವಿರ ಎಕರೆ ಜಮೀನು ಬೆಳೆದ ಬೆಳೆ ಮಣ್ಣು ಪಾಲಾಗಿ ಹೋಗಿದೆ. ಮಳೆ ನೀರಿನಿಂದ ಬದುಗಳು ಒಡೆದು ಹೋಗಿವೆ. ಹಾನಿಯಾದ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಅಧಿಕಾರಿಗಳು ಬಂದು ಭೇಟಿ ನೀಡಿಲ್ಲ.

ಆಗಸ್ಟ್ ಕೊನೆ ವಾರದಲ್ಲಿ ಬೆಳೆ ಹಾನಿ ಸಮೀಕ್ಷೆ ಆರಂಭಿಸುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮೊಳಕೆಯಲ್ಲಿ ಬೆಳೆ ಮಳೆ ನೀರಿನೊಂದಿಗೆ ಮಣ್ಣಾದರು ಸಹ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿಲ್ಲ. ಹೀಗಾದರೆ ರೈತ ಸಮೂಹದ ಗತಿ ಏನಾಗಬೇಕು. ಬದುಕು ನಿರ್ವಹಣೆ ಹೇಗೆ ಮಾಡಬೇಕು ಎಂಬುವುದು ಅಧಿಕಾರಿಗಳಿಗೆ ಅರಿಕೆ ಆಗುತ್ತಿಲ್ಲ ಎಂದು ಹುಲಸೋಗಿ, ಹಿರೇಬೆಂಡಿಗೇರಿ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಶೇ 97ರಷ್ಟು ಬಿತ್ತನೆಯಾಗಿದ್ದು ಜುಲೈ 3ನೇ ವಾರದಲ್ಲಿ 102.3 ಎಂ.ಎಂ. ಮಳೆಯಾಗಬೇಕಿತ್ತು ಆದರೆ 65.3 ಎಂ.ಎಂ ಮಳೆಯಾಗಿದೆ. ಅದರಿಂದ ವಾಡಿಕೆಗಿಂತ ಶೇ 36ರಷ್ಟು ಮಳೆ ಕಡಿಮೆಯಾಗಿದೆ. ಆದರೂ ಸಹ ಮಲೆನಾಡಿನ ಸೇರಗಿನಲ್ಲಿರುವ ಹುಲಸೋಗಿ ಮದ್ಲಿ ದುಂಡಸಿ ಕಡಳ್ಳಿ ಹುಲಗೂರು ಭಾಗದ ಜಮೀನಿನಲ್ಲಿ ಮಳೆ ಹೆಚ್ಚಾಗಿ ತಗ್ಗಾದ ಪ್ರದೇಶದಲ್ಲಿನ ಜಮೀನಿನಲ್ಲಿನ ಬೆಳೆ ಜಲಾವೃತ್ತಗೊಂಡಿವೆ. ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ಔಷಧಿ ಸಿಂಪರಣೆ ಮತ್ತು ಯೂರಿಯಾ ಗೊಬ್ಬರ ಹಾಕುವುದು ಸೇರಿದಂತೆ ಪ್ರಮುಖ ಮಾಹಿತಿ ರೈತರಿಗೆ ನೀಡಲಾಗುತ್ತಿದೆ ಎಂದು ಕೈಷಿ ಸಹಾಯಕ ನಿದರ್ೇಶಕ ಕೋಟ್ರೇಶ ಗಜ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.