ಹಿರೇಕೆರೂರು: ತಾಲೂಕಿನ ಮಡ್ಲೂರು ಗ್ರಾಮದ ಸರಹದ್ದಿನಲ್ಲಿರುವ ಕರೆಕಟ್ಟೆಯ ಕೆಳಭಾಗದಲ್ಲಿರುವ ಗೌಡರ ಗದ್ದೆಯಲ್ಲಿ ಬ್ರಾಹ್ಮಣರಿಗೆ ಸಂಬಂಧಿಸಿದ 2 ಕಾಶ್ಯಪಗೋತ್ರದ (ವಾಮನಕಲ್ಲು) ಶಿಲಾಶಾಸನಗಳು ಪತ್ತೆಯಾಗಿವೆ. ಈ ಶಾಸನಗಳು ಬ್ರಾಹ್ಮಣರಿಗೆ ಗದ್ದೆಯನ್ನು ದಾನ ಕೊಟ್ಟ ಬಗ್ಗೆ ತಿಳಿಸುತ್ತದೆ ಎಂದು ರಟ್ಟಿಹಳ್ಳಿ ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಚಾಮರಾಜ ಕಮ್ಮಾರ ತಿಳಿಸಿದರು.

ಇಲ್ಲಿಯ ಎರಡೂವರೆ ಅಡಿ ಎತ್ತರದ ಎರಡು ಅಡಿ ಅಗಲವಿರುವ ಈ ಶಿಲ್ಪದಲ್ಲಿ 5 ಸಾಲಿನ ಶಾಸನವಿದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ರೇಖಾಚಿತ್ರಗಳ ಮಧ್ಯೆ ವೇಷಧಾರಿ ವಾಮನನ ರೇಖಾ ಚಿತ್ರವಿದೆ. ಇದರಲ್ಲಿಯ ಪಾಠವಿಂತಿದೆ. ಕಾಶ್ಯಪ ಗೋತ್ರದ ದೇವಲ ಪ್ರವರ ದರುಕಾ ಶಾಖೆಯ ಹಸ್ತಾಂತರದ ಮಾದಯಗಳ ಮಕ್ಕಳು ಹೊಂನ್ನಗಳ ಮಾಂನ್ಯದ ಗದ್ದೆ ಬಿಜವರಿ ಎಂದು ಶಾಸನದ ಉಲ್ಲೇಖವಿದೆ.

ಇದು ಕಾಶ್ಯಪ ಗೋತ್ರದ ದೇವಲ ಪ್ರವರದ ದರುಕಾ ಶಾಖೆಯ ಹಸ್ತಾಂತರದ ಮೂಲಕ ಮಾದಯಗಳ ಮಕ್ಕಳು ಹೊಂನ್ನಯಗಳಿಗೆ ಗದ್ದೆಯನ್ನು ಬಿಜವರಿ ಖಂಡುಗ ೧ (೧೬೦ ಸೇರಿಗೆ) ಮಾನ್ಯ ಕೊಟ್ಟಿರುವುದು ತಿಳಿಸುತ್ತದೆ.

ಕಾಶ್ಯಪ ಗೋತ್ರವು ಮಹರ್ಷಿ ಕಶ್ಯಪ ವಂಶಸ್ಥರಿಗೆ ಸೇರಿದ್ದು ಇವರು ಸಪ್ತಋಷಿಗಳಲ್ಲಿ ಒಬ್ಬರು ಇವರು ದಕ್ಷ ಪ್ರಜಾಪತಿಯ ಪುತ್ರಿಯರಾದ ಅದಿತಿ, ರಿತಿ, ಕದ್ರು ಮೊದಲಾದವರನ್ನು ವಿವಾಹವಾಗಿ ದೇವ, ದಾನವ, ನಾಗ, ಗಂಧರ್ವ, ಯಕ್ಷ, ಕಿನ್ನರ, ಮನುಷ್ಯರು ಸೇರಿದಂತೆ ಹಲವು ಜೀವಿಗಳ ಸೃಷ್ಟಿಗೆ ಕಾರಣರಾದವರೆಂದು ತಿಳಿದು ಬರುತ್ತದೆ. ಇವರ ಪ್ರಭಾವವು ವೈದಿಕ ಕಾಲದಿಂದ ಇಂದಿನವರೆಗೂ ವಿಸ್ತರಿಸಿದೆ. ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳು ಇವರ ಆಧ್ಯಾತ್ಮಿಕ ಮತ್ತು ಸಂಸ್ಕೃತಿ ನಿರೂಪಣೆಗಳು ಅವರ ಕೊಡುಗೆಗಳನ್ನು ಎತ್ತಿ ತೋರಿಸುತ್ತವೆ.

ಈ ಶಾಸನದ ಉತ್ತರಕ್ಕಿರುವ ಮೂಲೆಯಲ್ಲಿ ಏರಿಯ ಮೇಲೆ ಇನ್ನೊಂದು ಇದೇ ರೀತಿ ಶಿಲ್ಪವಿದ್ದು ಅದರಲ್ಲಿ ಮಾನ್ಯದ ಗದ್ದೆ ಎಂಬ ಉಲ್ಲೇಖವಿದೆ. ಈ ಕಲ್ಲು ದಾನ ನೀಡಿದ ಗದ್ದೆಯ ಚಕಬಂದಿಯನ್ನು ತೋರಿಸುತ್ತದೆ. ಈ ಮಡ್ಲೂರಿನಲ್ಲಿ ಇದೂವರೆಗೆ ೩ ಶಾಸನಗಳು ಕಂಡು ಬಂದಿದ್ದು ಇದು ಹೊಸದಾಗಿ ಪತ್ತೆಯಾದ ೪ ನೆಯ ಶಾಸನವಾಗಿದೆ.

ಈ ಹಿಂದೆ ವರದಿಯಾದ ಒಂದೇ ಕಲ್ಲಿನಲ್ಲಿ ಎರಡು ಶಾಸನಗಳಿದ್ದು ಒಂದು ಕಲ್ಯಾಣ ಚಾಲುಕ್ಯರ ೬ನೆಯ ವಿಕ್ರಮಾದಿತ್ಯಕಾಲದ ಮಹಾಮಮಡಲೇಶ್ವರ ತೈಲಪ ಬನವಾಸಿ ೧೨೦೦೦ ಆಳುತ್ತಿರುವಾಗ ಮಡಲೂರ ಸಾತಗೌಡನ ಮಗ ಚೌಡಗೌಡ ನಾಳ್ಗಾವುಂಡನಾದ ಬಗ್ಗೆ ತಿಳಿಸುತ್ತದೆ. ಮತ್ತು ಕ್ರಿ.ಶ ೧೨೪೭ರ ಯಾದವ ಸಿಂಹಣನಿಗೆ ಸೇರಿದ ಅಪರೂಪದ ಆತ್ಮಬಲಿದಾನ ಕುರಿತ ಶಾಸನ ‘ಕೀಳ್ಪೋಗು’ ನಾಡಪ್ರಭು ಹೊಲ್ಲಗಾವುಂಡನಿಗೆ ಬಾಗಿಯರಸ ಮತ್ತು ಬಮ್ಮಿದೇವರಸರು ದಾನ ನೀಡಿದ ಬಗ್ಗೆ ತಿಳಿಸುತ್ತದೆ. ಇನ್ನೊಂದು ಈಶ್ವರಗುಡಿ ಹತ್ತಿರವಿರುವ ಶಾಸನದಲ್ಲಿ ಶಾನಭೋಗರ ಉಂಬಳಿಯ ಉಲ್ಲೇಖವಿದೆ ಇದು ಕಶ್ಯಪವಂಶದ ಪ್ರಮುಖರಾದ ದೇವಲರ ಮಾಂನ್ಯದ ಗದ್ದೆ ಕುರಿತು ಈ ಶಾಸನವು ತಿಳಿಸುತ್ತದೆ. ಎಂದು ರಟ್ಟೀಹಳ್ಳಿಯ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಚಾಮರಾಜ ಕಮ್ಮಾರವರು ಕ್ಷೇತ್ರಕಾರ್ಯದಲ್ಲಿ ಸಂಶೋಧನೆಯಲ್ಲಿ ಪತ್ತೆಮಾಡಿದ್ದಾರೆ. ಈ ಶೋಧದಲ್ಲಿ ಸಹಕರಿಸಿದ ಗ್ರಾಮಸ್ಥರಿಗೆ ಕೃತಜ್ಞತೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.