ಸವಣೂರ: ಸವಣೂರನ್ನು ಒಂದು ಪ್ರಬಲ ಸಂಸ್ಥಾನವಾಗಿ ರೂಪಿಸಿ ಶತಮಾನಗಳ ಕಾಲ ಸಮರ್ಥ ಆಳ್ವಿಕೆಯನ್ನು ನೀಡಿದ ಸವಣೂರಿನ ನವಾಬರ ಬಗ್ಗೆ ಕುರುಹುಗಳು ಇಂದಿಗೂ ಉಳಿದುಕೊಂಡಿವೆ.

ಸವಣೂರನ್ನು ಕೇಂದ್ರ ಸ್ಥಾನವಾಗಿ ಮಾಡಿಕೊಂಡಿದ್ದ ನವಾಬರು ಇತಿಹಾಸದ ಪುಟಗಳಲ್ಲಿ ಪ್ರಮುಖ ಸ್ಥಾನ ಪಡೆದವರು. ತಮ್ಮ ಸರ್ವಧರ್ಮ ಸಹಿಷ್ಣುತೆ ಹಾಗೂ ಆಧುನಿಕ ವಿಚಾರಧಾರೆಗಳಿಂದ, ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವದಿಂದ ಸರ್ವಮಾನ್ಯರಾದವರು.

ನವಾಬರ ಸಂಸ್ಥಾನದ ಸಂಸ್ಥಾಪಕರಾದ ಅಬ್ದುಲ್ ರವೂಫ್ಖಾನ್ ದಲೇಲಪುರ, ಜುಮ್ಮೇರಾತಪೇಟೆ, ಮಂಗಲಪೇಟೆ, ರಹಮತ್ಪುರ, ಜುಮ್ಮಾಬಜಾರ್, ಬಾಜೀಕಟ್ಟಾ, ಶಹಾಬಜಾರ್, ಕೋರೀಪೇಟೆ, ಚಾರ್ಷುಂಬಾ ಬಜಾರ್ ಸೇರಿ ಒಟ್ಟು ಎಂಟು ಪೇಟೆಗಳನ್ನು ನಿರ್ಮಿಸಿದರು. ನಂತರದ ಪೀಳಿಗೆಯ ನವಾಬರು ಸವಣೂರಿನಲ್ಲಿ ‘ರಶೀದ್ ಮಂಜಿಲ್’ ಅರಮನೆ, ಕೋಟೆ, ಹಳೆ ಮಹಲ್ ಸೇರಿದಂತೆ ಹಲವು ಬೃಹತ್ ಕಟ್ಟಡಗಳನ್ನು ನಿರ್ಮಿಸಿದರು.

ಕಲಾ ಶ್ರೀಮಂತಿಕೆ:

ಹಿಂದೂ ಅರೇಬಿಕ್ ಶೈಲಿಗಳ ಸಮ್ಮಿಶ್ರಣದಂತಿರುವ ನವಾಬರ ಕಾಲದ ಕಟ್ಟಡಗಳು ಅಂದಿನ ಕಲಾ ಶ್ರೀಮಂತಿಕೆಗೆ ಸಾಕ್ಷಿಗಳಾಗಿದ್ದವು. ಇಂದು ನವಾಬರ ಕಾಲದ ಅನೇಕ ಕಟ್ಟಡಗಳು ಅನಾಥವಾಗಿದ್ದು, ಸೂಕ್ತ ನಿರ್ವಹಣೆಗಳು ಇಲ್ಲದೆ ಹಾಳು ಕೊಂಪೆಗಳಾಗಿದೆ.

ಕಂದಾಯ ಇಲಾಖೆಯ ವಶದಲ್ಲಿರುವ ಹಳೆ ಮಹಲ್ ಕಟ್ಟಡ ಶಿಥಿಲಾವಸ್ಥೆಯನ್ನು ತಲುಪಿ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿತ್ತು. ಅದನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪವನ್ನು ತೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ₹2 ಕೋಟಿ ಅನುದಾನದಲ್ಲಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಪಾಳುಬಿದ್ದ ರಶೀದ್ ಮಂಜಿಲ್

ನವಾಬರ ಅರಮನೆ ‘ರಶೀದ್ ಮಂಜಿಲ್' ಸಂಪೂರ್ಣ ಹಾಳಾಗಿದೆ. ಅದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ತರಬೇತಿ ಕೇಂದ್ರವನ್ನಾಗಿ ನಿರ್ಮಾಣ ಮಾಡಲು ಹಸ್ತಾಂತರಿಸಿ ಸುಮಾರು ವರ್ಷಗಳು ಗತಿಸಿದರೂ ಇದುವರೆಗೆ ಯಾವುದೇ ಕಾರ್ಯವನ್ನು ಕೈಗೊಳ್ಳದೇ ಇರುವುದರಿಂದ ಕೇವಲ ಕಲ್ಲುಗಳ ರಾಶಿ ಮಾತ್ರ ಉಳಿದುಕೊಂಡಿವೆ.

ಪಟ್ಟಣದ ಹೊರ ವಲಯದಲ್ಲಿದ್ದ ಈ ಮಂಜಿಲ್ ಈಗ ಸ್ಮಶಾನವಾಗಿದೆ. ಇನ್ನೂ ಈಗಿನ ತಾಲ್ಲೂಕು ಪಂಚಾಯ್ತಿ ಕಟ್ಟಡ ‘ತ್ಯಾಲೀಫ್' ಸಹ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಅಭಿವೃದ್ಧಿ ಕಂಡಿದೆ. ನಗರದ ಸುತ್ತಲೂ ಇದ್ದ ಕಂದಕಗಳು ಬಹುತೇಕ ಒತ್ತುವರಿಗೆ ಒಳಗಾಗಿದ್ದು, ಕೆಲವು ಸ್ಥಳಗಳಲ್ಲಿ ಅವಶೇಷಗಳಾಗಿ ಕೊಳಚೆ ಗುಂಡಿಗಳಾಗಿ ಉಳಿದುಕೊಂಡಿವೆ. ನಗರದ ವಿವಿಧ ಮಾರ್ಗಗಳಲ್ಲಿ ಇದ್ದ ಬೃಹತ್ ದ್ವಾರ ಬಾಗಿಲುಗಳು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿವೆ.

ನವಾಬರ ಹಿನ್ನಲೆ:

ಸವಣೂರ ನವಾಬ ಸಾಮ್ರಾಜ್ಯದ ಸ್ಥಾಪಕ ಅಬ್ದುಲ್ ರವೂಫ್ಖಾನ್. ಈತ ಮೂಲತ: ಅಪಘಾನಿಸ್ತಾನದ `ಮೈನೆ' ಬುಡಕಟ್ಟು ಜನಾಂಕಕ್ಕೆ ಸೇರಿದವರು. ಅಲ್ಲಿ ನಡೆದ ಧಂಗೆಯಿಂದಾಗಿ ಭಾರತಕ್ಕೆ ವಲಸೆ ಬಂದವರು. ವಿಜಾಪುರದ ಆದಿಲ್ಶಾಹಿಗಳ ಆಶ್ರಯದಲ್ಲಿದ್ದ ಅಬ್ದುಲ್ ರವೂಫ್ಖಾನರ (1686) ಶೌರ್ಯ, ಬುದ್ಧಿಮತ್ತೆ ಮತ್ತು ಅಪಘಾನಿ ದರ್ಪವನ್ನು ತಿಳಿದುಕೊಂಡಿದ್ದ ಮೊಗಲ್ ದೊರೆ ಔರಂಗಜೇಬನು ಕರ್ನಾಟಕ ಸುಭಾ ಸುಬೇದಾರನಾಗಿ ನೇಮಿಸಿದ್ದ.

ರವೂಫ್ಖಾನ್ ಕಾಲಾನಂತರ ಗಫಾರ್ಖಾನ್, ಮಜೀದ್ ಖಾನ್ ಸೇರಿದಂತೆ ಹಲವು ನವಾಬರು ಸವಣೂರ ರಾಜ್ಯವನ್ನು ಆಳಿದರು. ತಮ್ಮ ಆಡಳಿತದ ಅವಧಿಯಲ್ಲಿ ಸವಣೂರು ರಾಜ್ಯವನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ರಾಜ ಮನೆತನದ ಇತಿಹಾಸ ಹಾಗೂ ಅವರ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.