ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಶಾಲೆಗಳಲ್ಲೂ ಹೈಟೆಕ್‌ ಶಿಕ್ಷಣ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್.

ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಹೇಳಿಕೆ
Published 3 ಜನವರಿ 2024, 4:57 IST
Last Updated 3 ಜನವರಿ 2024, 4:57 IST
ಅಕ್ಷರ ಗಾತ್ರ

ಹಿರೇಕೆರೂರು: ಕನ್ನಡ ಮಾದ್ಯಮ ಶಾಲೆಗಳಲ್ಲಿಯೂ ಹೈಟೆಕ್ ಶಿಕ್ಷಣದ ಕ್ರಾಂತಿಯಾಗಬೇಕು. ದೃಶ್ಯ ಮಾದ್ಯಮದ ಮೂಲಕ ಮಕ್ಕಳ ಕಲಿಕೆಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಹೇಳಿದರು.

ಪಟ್ಟಣದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1977-78ನೇ ಸಾಲಿನಿಂದ 1985-86 ನೇ ವರೆಗೂ ಕಲಿತ ಹಳೆಯ ವಿದ್ಯಾರ್ಥಿಗಳ ಕಾಣಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೇ ಶಾಲೆಯಲ್ಲಿ ಬಡತನದಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಳೆಯ ವಿದ್ಯಾರ್ಥಿಗಳು ಕೂಡಿಕೊಂಡು ತಾವು ಕಲಿತ ತಮ್ಮೂರ ಶಾಲೆಗೆ ಕಾಣಿಕೆ ತಂದಿದ್ದಾರೆ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶ ಇಟ್ಟುಕೊಂಡು ಅಂದಾಜು ₹36 ಸಾವಿರ ಮೌಲ್ಯದ ಟಿವಿಯನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದರು.

ಈ ಸೇವಾ ಮನೋಭಾವನೆ ಮುಂದಿನ ಪೀಳಿಗೆಗೂ ಅನುಕರಣೀಯವಾಗಿದೆ. ಮಕ್ಕಳ ಕಲಿಕೆ ಸರ್ಕಾರವು ವಿವಿಧ ಸೌಲಭ್ಯಗಳನ್ನು ಕೊಡುತ್ತಿದ್ದು ಜೊತೆಗೆ ಇಂತಹ ಹಳೆಯ ವಿದ್ಯಾರ್ಥಿಗಳ ನೆರವು ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಬೆಳೆಯಲು ದೃಶ್ಯ ಮಾಧ್ಯಮಗಳು ಬಹಳ ಪೂರಕವಾಗಿದೆ. ಮಕ್ಕಳು ಈ ದೂರದರ್ಶನದಲ್ಲಿ ಬರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲೆತ ಶಾಲೆಗೆ ಶಿಕ್ಷಕರಿಗೆ, ಪಾಲಕರಿಗೆ ಹೆಸರು ತಂದುಕೊಡಬೇಕು ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯ ಎಂ.ಆರ್. ಕಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಎಸ್.ಆರ್. ಮುರ್ಡೇಶ್ವರ,ವಿಠಲ ಡಾಂಗೆ ಅಂದಿನ ಶಾಲೆಯ ದಿನಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಎಸ್‌ಡಿಎಂಸಿ.ಅಧ್ಯಕ್ಷ ಗೋಪಾಲಕೃಷ್ಣ ಬಾದಾಮಿ ಕ್ಷೇತ್ರ ಸಮನ್ವಯ ಅಧಿಕಾರಿ ಎನ್.ಸುರೇಶಕುಮಾರ, ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷೆ ಶ್ವೇತಾ ಮಾರವಳ್ಳಿ, ಸದಸ್ಯರಾದ ರಾಜೇಶ್ವರಿ ಅಜ್ಜಪ್ಪನವರ, ಸತೀಶ ಕೋರಿಗೌಡ್ರ,
ದಾದಾಪೀರ ನರಗುಂದ, ವೆಂಕಟೇಶ ಉಪ್ಪಾರ, ಮಹೇಶ ಮಡಿವಾಳರ, ಟಿ.ವಿನಾಯಕ, ವಿಜಯಕುಮಾರ ಹಳಕಟ್ಟಿ,ರವಿ ಚಿಂದಿ,ಕುಮಾರ ಅರ್ಕಾಚಾರಿ, ಜಗದೀಶ ಹೊನ್ನತ್ತಿ, ಶಿವಾನಂದ ಅಣ್ಣಯ್ಯನವರ, ವೆಂಕಟೇಶ ಕೊರಚರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT