ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು | ಗೃಹಪ್ರವೇಶದ ಊಟ ಸೇವಿಸಿ 37 ಮಂದಿ ಅಸ್ವಸ್ಥ

Published 26 ಆಗಸ್ಟ್ 2023, 15:34 IST
Last Updated 26 ಆಗಸ್ಟ್ 2023, 15:34 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಗೃಹಪ್ರವೇಶದ ಊಟ ಸೇವಿಸಿ 37 ಮಂದಿ ಅಸ್ವಸ್ಥಗೊಂಡಿದ್ದಾರೆ.

ಗ್ರಾಮದ ಬಸವರಾಜ ಶೇಖಪ್ಪ ಶಾಂತನವರ ಅವರ ಗೃಹಪ್ರವೇಶ ಶುಕ್ರವಾರ ಇತ್ತು. ಕಾರ್ಯಕ್ರಮದಲ್ಲಿ ಊಟ ಮಾಡಿದ ಜನರು ರಾತ್ರಿ ವಾಂತಿಬೇಧಿಯಿಂದ ಬಳಲಿ ಅಸ್ವಸ್ಥಗೊಂಡರು. ಶನಿವಾರ ಬೆಳಿಗ್ಗೆ ತುಮ್ಮಿನಕಟ್ಟಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗೋವಿಂದ ನೇತೃತ್ವದಲ್ಲಿ 37 ಜನರಿಗೂ ಚಿಕಿತ್ಸೆ ನೀಡಿದರು. ಸುದ್ದಿ ತಿಳಿದ ಶಾಸಕ ಪ್ರಕಾಶ ಕೋಳಿವಾಡ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಸ್ವಸ್ಥಗೊಂಡ ಜನರು
ಅಸ್ವಸ್ಥಗೊಂಡ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT