ಮಳೆಗಾಲದ ಸಮಯದಲ್ಲಿ ಕಂಚಿನೆಗಳೂರ ವಡ್ಡು ಪಿಕ್‌ನಿಕ್ ಸ್ಪಾಟ್ ಆಗುತ್ತಿದೆ. ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆ. ನದಿ ತಟದಲ್ಲಿರುವ ಬ್ರಹ್ಮ ಲಿಂಗು ಚನ್ನಬಸವಣ್ಣ ಮಹರಾಜರ ದೇವಸ್ಥಾನ ಬಸವಣ್ಣ ದೇವರ ಗುಡಿ ಇಲ್ಲಿ ಧಾರ್ಮಿಕ ವಾತಾವರಣ ಮೇಳೈಸಲು ಕಾರಣವಾಗಿದೆ.
– ರಂಗನಾಥ ಲಂಗಟಿ, ಗ್ರಾಮಸ್ಥರ
ಮಳೆಗಾಲದಲ್ಲಿ ಧರ್ಮಾ ನದಿ ತುಂಬಿ ಹರಿಯುತ್ತಿದ್ದರೆ ಕಂಚಿನೆಗಳೂರ ವಡ್ಡು ವೀಕ್ಷಣೆಗೆ ಮನಸ್ಸು ಹಾತೊರೆಯುತ್ತದೆ. ಮಕ್ಕಳನ್ನು ಕರೆದುಕೊಂಡು ವಡ್ಡಿನ ಭೇಟಿಗೆ ತೆರಳುತ್ತೇವೆ. ಅಪಾರ ಜಲರಾಶಿ ಪ್ರಕೃತಿಯ ಸೌಂದರ್ಯ ಮನಸ್ಸನ್ನು ಮುದಗೊಳಿಸುತ್ತದೆ.