ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕನಾಗಿದ್ದ ಧರ್ಮಪ್ಪ ಈಗ ಕೃಷಿಕ

Last Updated 15 ಜುಲೈ 2019, 20:01 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ಬೆಂಗಳೂರಿನ ಕಾಲ್‌ ಸೆಂಟರ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಧರ್ಮಪ್ಪ ಬೈಲಮನಿ ಎಲೆ ಬಳ್ಳಿಕೃಷಿ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ.

ತಮ್ಮ ಕುಟುಂಬದಿಂದ ಬಂದ 2 ಎಕರೆ ಕೃಷಿ ಭೂಮಿಯಲ್ಲಿ ಎಲೆ ಬಳ್ಳಿಬೆಳೆದಿದ್ದಾರೆ. ಬಳ್ಳಿ ಬೆಳೆಯುವ ಮಾಹಿತಿಯನ್ನು ಬೇರೆ ರೈತರಿಗೆ ನೀಡುವುದು ಹಾಗೂ ಅವರಿಂದ ಪಡೆಯುತ್ತಿದ್ದಾರೆ. ವಿವಿಧ ಪ್ರಯೋಗಗಳನ್ನು ಮಾಡುತ್ತ ಸ್ಥಿರ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ.

ಚಾಲಕನಾಗಿದ್ದಾಗ ಬಿಡುವಿಲ್ಲದೆ ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಬಂದವು. ಇದರಿಂದ ಕೆಲಸ ಬಿಟ್ಟುಸ್ವಂತ ಜಮೀನಲ್ಲಿ ಕೃಷಿ ಮಾಡ ತೊಡಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ₹50 ಸಾವಿರ ಸಾಲ ಪಡೆದು ಗೋಡಿಹಾಳ ಗ್ರಾಮದ ಒಂದು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿಅರ್ಧ ಎಕರೆ ಎಲೆ ಬಳ್ಳಿಬೆಳೆದೆ. ನೀರಿನ ಕೊರತೆ ಆಗದಿರಲಿ ಎಂದು ಮತ್ತೊಂದು ಕೊಳವೆ ಬಾವಿ ಕೊರೆಸಿ10 ಗುಂಟೆ ಬೀಜ ಬಾಳೆಬೆಳೆದೆ ಎಂದು ಧರ್ಮಪ್ಪ ತಿಳಿಸಿದರು.

ಬೆಳೆಯುವುದು ಹೇಗೆ?: ಇದನ್ನು ಬೆಳೆಯಲು ಅತಿಯಾದ ನೀರು ನಿಲ್ಲದ ಕೃಷಿ ಭೂಮಿ ಸೂಕ್ತ. ಅರ್ಧ ಎಕರೆ ಕಲ್ಲು ಮಿಶ್ರಿತ ಕಂಪು ಭೂಮಿಯಲ್ಲಿ 4/4 ಅಡಿ ಅಂತರದಲ್ಲಿ ಗುಣಿಗಳನ್ನು ತೆಗೆದು ಮೂರು ಗಣ್ಣಿಗೆ ಕತ್ತರಿಸಿದ ಒಂದು ಎಲೆ ಬಳ್ಳಿತುಂಡು ಸೇರಿದಂತೆ ನುಗ್ಗೆ, ಚೊಗಚೆ, ಬೊರಲ ಗಿಡಗಳನ್ನು ನೆಟ್ಟಿದ್ದೇನೆ. ಆರಂಭದಲ್ಲಿ ಎರಡು ದಿನಕ್ಕೊಮ್ಮೆ, ನಂತರ ವಾರಕ್ಕೆ ಎರಡು ಬಾರಿ ನೀರನ್ನು ನೀಡಬೇಕು. ಮಳೆಗಾಲದಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು

ರಾಣೆಬೆನ್ನೂರು, ಹರಿಹರ ಮಾರುಕಟ್ಟೆಗೆ ಒಯ್ಯುತ್ತೇವೆ. ಬೇಡಿಕೆ ಇದ್ದಾಗ ಹುಬ್ಬಳ್ಳಿ ಮಾರುಕಟ್ಟೆಯಿಂದ ಇಲ್ಲಿಗೆ ಬಂದು ಕೊಳ್ಳುತ್ತಾರೆ. ಸ್ಥಳೀಯರು ಮದುವೆ ಇತರೆ ಶುಭ ಕಾರ್ಯಗಳಿಗೆ ಬೇಕಾದಾಗ ಇಲ್ಲಿಗೆ ಬಂದು ಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಎಲೆಬಳ್ಳಿಯನ್ನು ನೆಲಕ್ಕೆ ಇಳಿಸಿ 6 ರಿಂದ 7 ಅಡಿವರೆಗೆ ಉಳಿಸಿಕೊಂಡು ಮೇಲ್ಭಾಗದ ತುದಿಯಿಂದ ಸುರುಳಿ ಸುತ್ತಿ ಗುಂಡಿಯಲ್ಲಿ ಮುಚ್ಚುತ್ತೇವೆ. ಇದರಿಂದ ಬಳ್ಳಿ ಮತ್ತೆ ಮುಗುಳು ಕೀಳುವುದರಿಂದ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತದೆ ಪತ್ನಿ ನಾಗರತ್ನಮ್ಮ ವಿವರಿಸಿದರು.

ವರ್ಷಕ್ಕೆ 130 ಪೆಂಡಿ ವೀಳ್ಯದೆಲೆ
ವರ್ಷಕ್ಕೊಮ್ಮೆ ಸೆಗಣಿ ಹಾಗೂ ಕುರಿ ಗೊಬ್ಬರ ಹಾಕುತ್ತಿದ್ದೇನೆ. ರೈತ ಮಂಜಪ್ಪ ಮಾದಣ್ಣನವರ ಸಲಹೆ ಮೇರೆಗೆ ಒಂದು ವರ್ಷದಿಂದ ಡ್ರಿಪ್ ಮೂಲಕ ನೀರುನೀಡುತ್ತಿದ್ದೇನೆ. ಅರ್ಧ ಎಕರೆಗೆ ವರ್ಷಕ್ಕೆ 120 ರಿಂದ 130 ಪೆಂಡಿಗಳಷ್ಟು ವೀಳ್ಯದೆಲೆಯ ಉತ್ಪಾದನೆ ಆಗುತ್ತದೆ. ಒಂದು ಪೆಂಡೆಗೆ ಚಳಿಗಾಲದಲ್ಲಿ ₹8 ಸಾವಿರಕ್ಕೆ, ಮಳೆಗಾಲದಲ್ಲಿ ₹3 ರಿಂದ 5 ಸಾವಿರಕ್ಕೆ ಮಾರುತ್ತೇವೆ. ನುಗ್ಗೆ ವರ್ಷಕ್ಕೆ 3ಕ್ವಿಂಟಾಲ್ ಉತ್ಪಾದನೆ ಆಗುತ್ತಿದೆಎಂದು ಧರ್ಮಪ್ಪತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT