ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕಾರ್ಮಿಕ ಸಚಿವರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

Last Updated 26 ಫೆಬ್ರುವರಿ 2023, 12:26 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ): ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರದ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಶಿಗ್ಗಾವಿ ತಾಲ್ಲೂಕಿನ ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ(19) ಮೃತಪಟ್ಟ ಕಾರ್ಮಿಕ.

ಕಬ್ಬು ತುಂಬುವ ಯಂತ್ರದ ಬೆಲ್ಟಿಗೆ ನವೀನನ ಎರಡು ಕೈಗಳು ಸಿಲುಕಿ ತುಂಡಾಗಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.

"ಕೋಣನಕೇರಿಯ ವಿಐಪಿಎನ್ ಡಿಸ್ಟಿಲರಿ ಕಾರ್ಖಾನೆಯಲ್ಲಿ ಯಾವುದೇ ಸುರಕ್ಷಾ ಕ್ರಮವಿಲ್ಲದೇ, ದೊಡ್ಡ ದೊಡ್ಡ ಯಂತ್ರಗಳ ಬೆಲ್ಟ್ ಹತ್ತಿರ ಕೌಶಲರಹಿತ ಕಾರ್ಮಿಕನಿಂದ ಬುಟ್ಟಿಯಿಂದ ಕಬ್ಬಿನ ಪುಡಿಯನ್ನು ತುಂಬಿ ಹಾಕಿಸಲಾಗುತ್ತಿತ್ತು. ಸ್ಥಳದಲ್ಲಿ ಯಾವುದೇ ಜಾಲರಿ, ಸುರಕ್ಷಾ ಕ್ರಮಗಳಿಲ್ಲದ ಕಾರಣ ಈ ದುರ್ಘಟನೆ ನಡೆದಿದೆ" ಎಂದು ಮೃತನ ಸಂಬಂಧಿಗಳು ದೂರಿದ್ದಾರೆ.

ಕಾರ್ಖಾನೆ ಮಾಲೀಕ ವಿವೇಕ ಹೆಬ್ಬಾರ್, ಜನರಲ್ ಮ್ಯಾನೇಜರ್ ಮಂಜುನಾಥ, ಲೇಬರ್ ಸಪ್ಲೈರ್ಗಳಾದ ಬಸವರಾಜ, ಉಮೇಶ ಸುರವೇ, ವಿಶ್ವನಾಥ ಎ.ಎಸ್, ಆಕಾಶ ಧರ್ಮೋಜಿ ಸೇರಿದಂತೆ 6 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT